Advertisement

Fraud case ಬಹುಕೋಟಿ ರೂ. ವಂಚನೆ ಪ್ರಕರಣ: ಹಿರಿಯಡಕದ ಬಳಿ ಮನೆಕಟ್ಟಿಸುತ್ತಿದ್ದ ಆರೋಪಿಗಳು!

11:38 PM Sep 16, 2023 | Team Udayavani |

ಉಡುಪಿ: ಕೋಟಿ-ಕೋಟಿ ರೂ. ಹಣ ಪಡೆದು ಉದ್ಯಮಿಗೆ ವಂಚಿಸಿದ್ದ ಚೈತ್ರಾ ಕುಂದಾಪುರ ತನ್ನ ಗೆಳೆಯನ ಹೆಸರಿನಲ್ಲಿ ಮನೆ ಕಟ್ಟಿಸುತ್ತಿರುವ ಅಂಶ ಈಗ ಸಿಸಿಬಿ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ಗೆಳೆಯ ಶ್ರೀಕಾಂತ್‌ ನಾಯಕ್‌ ಹೆಸರಿನಲ್ಲಿ ಉಡುಪಿಯ ಹಿರಿಯಡಕದ ಬಳಿ ವರ್ಷಕ್ಕೂ ಹಿಂದೆ ಖರೀದಿಸಿರುವ 20ರಿಂದ 25 ಸೆಂಟ್ಸ್‌ ಜಾಗದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಎರಡು ಅಂತಸ್ತಿನ ಮನೆ ನಿರ್ಮಾಣದ ಕಾಮಗಾರಿ ಇದಾಗಿದೆ. ಈ ಪೈಕಿ ಒಂದನೇ ಅಂತಸ್ತಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮನೆ ನಿರ್ಮಾಣಕ್ಕೆ ಬೇಕಾದ ಜಲ್ಲಿ, ಕಲ್ಲು, ಮರಳನ್ನು ಸ್ಥಳದಲ್ಲಿ ದಾಸ್ತಾನು ಇರಿಸಲಾಗಿದೆ. ನೀರಿನ ಸಂಪರ್ಕಕ್ಕೆ ಮನೆಯ ಎದುರು ಭಾಗದಲ್ಲಿ ಎರಡು ಬೋರುವೆಲ್‌ ಕೊರೆಯಲಾಗಿದೆ. ಸದ್ಯ ಚೈತ್ರಾ ಹಾಗೂ ಶ್ರೀಕಾಂತ್‌ ನಾಯಕ್‌ ಬಂಧನವಾಗುತ್ತಿದ್ದಂತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಸಿಸಿಬಿ ಪೊಲೀಸರಿಂದ ತನಿಖೆ
ಸದ್ಯ ಉಡುಪಿಯಲ್ಲಿಯೇ ಬೀಡುಬಿಟ್ಟಿರುವ ಸಿಸಿಬಿಯ ಒಂದು ತಂಡ ಶನಿವಾರ ಉಪ್ಪೂರಿನಲ್ಲಿರುವ ಕೋ-ಆಪರೇಟಿವ್‌ ಸೊಸೈಟಿಗೆ ಭೇಟಿ ನೀಡಿ ಹಣ ವರ್ಗಾವಣೆ ಹಾಗೂ ಆರೋಪಿಗಳು ಠೇವಣೆ ಇರಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬೈಂದೂರು, ಕುಂದಾಪುರ ಹಾಗೂ ಉಡುಪಿ ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ.

ಉಪ್ಪೂರಿನ ಬ್ಯಾಂಕ್‌ನಲ್ಲಿ ಆರೋಪಿ ಶ್ರೀಕಾಂತ್‌ ನಾಯಕ್‌ ಹೆಸರಿನಲ್ಲಿ ಈಕೆ ಅಪಾರ ಪ್ರಮಾಣದ ನಗದು, ನಿವೇಶನ ಪತ್ರ ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಕಾಲ ಸಿಸಿಬಿ ಪೊಲೀಸರು ಉಡುಪಿಯಲ್ಲಿಯೇ ಇದ್ದು ಮತ್ತಷ್ಟು ಮಾಹಿತಿಗಳು ಕಲೆ ಹಾಕಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next