Advertisement

ಬಲೂನ್‌ ಊದುವಾಗ ಜಿಪಂ ಅಧ್ಯಕ್ಷೆ ಅಸ್ವಸ್ಥ

10:38 PM Jan 04, 2020 | Team Udayavani |

ಬಾಗಲಕೋಟೆ: ಬಲೂನ್‌ ಊದುವಾಗ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಠಾತ್‌ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತುಳಸಿಗೇರಿ ಸರ್ಕಾರಿ ಶಾಲೆಯಲ್ಲಿ ಶನಿವಾರ ವಿಜ್ಞಾನ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಉದ್ಘಾಟನೆ ವೇಳೆ ಅಧ್ಯಕ್ಷೆ, ಬಲೂನ್‌ ಊದುವಾಗ ಶಾಂಪೂ, ಗ್ಲಿಸರಿನ್‌ ಇರುವ ಎಲಿಫೆಂಟ್‌ ಪೊಂಮ್‌ ನೊರೆ ಹೊಟ್ಟೆಗೆ ಸೇರಿ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಪಂ ಸಿಇಒ ಗಂಗೂಬಾಯಿ ಮಾನಕರ ಸೇರಿ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next