ತಿ.ನರಸೀಪುರ: ತಾಲೂಕಿನ ತಲಕಾಡು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿ.ಹೆಚ್.ಕವಿತಾ ವಿಜಯಕುಮಾರ ನಾಯಕ ಹಾಗೂ ಉಪಾಧ್ಯಕ್ಷರಾಗಿ ಹೆಚ್.ರಾಜು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಹಿಂದಿನ ಅಧ್ಯಕ್ಷೆ ಮಮತಾ ನರಸಿಂಹಮಾದ ನಾಯಕ ಹಾಗೂ ಉಪಾಧ್ಯಕ್ಷ ಟಿ.ಸಿ.ಕುಮಾರನಾಯಕ ಅವರಿಬ್ಬರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯಿತು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 7ನೇ ಬ್ಲಾಕ್‌ನ ಸದಸ್ಯೆ ಬಿ.ಹೆಚ್.ಕವಿತ ವಿಜಯಕುಮಾರ ನಾಯಕ ಹಾಗೂ ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ್ಕಕೆ 2ನೇ ವಾರ್ಡಿನ ಸದಸ್ಯ ಹೆಚ್.ರಾಜು ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಪಂಚಾಯಿತಿಯಲ್ಲಿನ 25 ಮಂದಿ ಸದಸ್ಯರಲ್ಲಿ 20 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ, ಸಹಾಯಕ ಚುನಾವಣಾಧಿಕಾರಿಯಾಗಿ ಬಿಸಿಯೂಟ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಾರ್ಯನಿರ್ವಹಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಲಾಯಿತು. ಗ್ರಾಮ ದೇವತೆ ಶ್ರೀ ಬಂಡರಮ್ಮನ ದೇವಾಲಯದವರೆಗೆ ಮೆರವಣಿಗೆಯಲ್ಲಿ ತೆರಳಿ ವಿಶೇಷ ಪೂಜೆಯಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಗ್ರಾ.ಪಂ ಸದಸ್ಯರಾದ ಟಿ.ಸಿ.ಪ್ರಕಾಶ್, ಮಲ್ಲಣ್ಣಿ, ಬಿ.ರಘು, ಎನ್.ಪುಷ್ಪ, ಚಂದ್ರಕುಮಾರಿ, ನಾಗರತ್ನ, ಭಾಗ್ಯಮ್ಮ, ಆಸ್ಮಿàನ್ ನೌಷದ್, ಸುಷ್ಮಾ, ತಿಪ್ಪೆ$àಕಾಳಿ ರಂಗನಾಥ್, ರಾಧಾ ಕೃಷ್ಣಮೂರ್ತಿ, ಸುಂದರ, ದೊಡ್ಡಮಲ್ಲೇಗೌಡ, ಕಾಂತರಾಜು, ರಾಜೇಶ್ವರಿ, ಭಾಗೀರಥಿ, ಬ್ಲಾಕ್ ಕಾಂಗ್ರೆಸ್‌ನ ಎಸ್ಟಿ ಅಧ್ಯಕ್ಷ ಹಸ್ತಿಕೇರಿ ನಾಗರಾಜು, ಮಾಜಿ ಅಧ್ಯಕ್ಷರಾದ ಮಲ್ಲಯ್ಯ,
ಶಾಂತರಾಜು, ಗುತ್ತಿಗೆದಾರ ಚಂದ್ರು, ಮುಖಂಡರಾದ ಚಂದ್ರಪ್ಪ, ಲಕ್ಷ್ಮಣ, ನೌಷದ್ ಪಾಷ, ಕಾಳಿಹುಂಡಿ ಮಹೇಂದ್ರ, ಸುಂದರ ನಾಯಕ, ಮೇದನಿ ಸಿದ್ದರಾಜು, ನರಸಿಂಹಮಾದನಾಯಕ, ಸತೀಶ್ ನಾಯಕ, ಕ್ವಾಲಿಟಿ ಗೋವಿಂದ, ಅಂಗಡಿ ನರಸಿಂಹಣ್ಣ, ಟಿ.ಸಿ.ಚಾಮನಾಯಕ, ನಂಜುಂಡಪ್ಪ, ದಿನೇಶ್, ಮಲ್ಲೇಶ್, ಪೆಪ್ಸಿ ಚಂದ್ರು ಹಾಗೂ ಇನ್ನಿತರರು ಹಾಜರಿದ್ದರು.