Advertisement
ಎನ್‌ಇಪಿಯಲ್ಲಿ ರಾಜ್ಯಭಾಷೆ, ಮಾತೃಭಾಷೆ, ಮನೆ ಭಾಷೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನು ನೀಡಲಾಗಿದೆ. ಈಗ ಸಮಸ್ಯೆಯಾಗಿರುವುದು ಮಾಧ್ಯಮ ವಲ್ಲ, ಶಿಕ್ಷಣದ ಗುಣಮಟ್ಟ. ಹಿಂದೆ 5ನೇ ತರಗತಿಯ ಅನಂತರ ಇಂಗ್ಲಿಷ್ ಕಲಿಸಿದರೂ ಚೆನ್ನಾಗಿ ಕಲಿಸ ಲಾಗುತ್ತಿತ್ತು. ಇದಕ್ಕಾಗಿ ಗುಣಮಟ್ಟದ ಶಿಕ್ಷಕರು ಆವಶ್ಯಕ. ಇದನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಬಗ್ಗೆ ಸಲಹೆ ಸೂಚನೆ ಗಳನ್ನು ಸ್ವೀಕರಿಸುತ್ತೇವೆ. ಕೇಂದ್ರ ಸರಕಾರವು ಎನ್‌ಸಿಎಫ್ ರಚಿಸಿದ ಅನಂತರ ರಾಜ್ಯ ದಲ್ಲಿ ಕೆಸಿಎಫ್ ರಚಿಸಿ ಪಠ್ಯಪುಸ್ತಕ ಸಿದ್ಧಗೊಳಿಸಲಾಗುತ್ತದೆ.
Related Articles
Advertisement
ನ್ಯೂಟನ್ ಸಿದ್ಧಾಂತ ತಪ್ಪು ಎಂದು ನಾವು ಹೇಳಿಲ್ಲ. ಅವನ ಗುರುತ್ವಾಕರ್ಷಣೆ ಸಿದ್ಧಾಂತ ವನ್ನು ಕೇರಳದ ಪುಸ್ತಕ ವೊಂದರಿಂದ ನಕಲು ಮಾಡ ಲಾಗಿದೆ ಎಂಬ ವಿಷಯ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಚರ್ಚೆಯಾಗುತ್ತಿದೆ. ಅದನ್ನು ಹೇಳಿದ್ದೇವೆ.
ಪೈಥಾಗೊರಸ್ ಪ್ರಮೇಯವೂ ನಮ್ಮ ಕೊಡುಗೆ :
ಪೈಥಾಗೊರಸ್ ಪ್ರಮೇಯ ಎರವಲು ಪಡೆದದ್ದು ಎಂದು ಹತ್ತಾರು ವರ್ಷಗಳಿಂದ ಚರ್ಚೆಯಾಗುತ್ತಿದೆ. ಈ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಲಾಗಿದೆ. ಸನಾತನ ಭಾರತದ ಗಣಿತಜ್ಞ ಬೌದ್ಧಾಯನ ಈ ಪ್ರಮೇಯ ಮಂಡಿಸಿದ್ದ. ಪೈಥಾಗೊರಸ್ ಪ್ರಮೇಯದ ಮೂಲ ಭಾರತದ ಕೊಡುಗೆ ಎಂಬುದನ್ನು ತಿಳಿಸಿದ್ದೇವೆ.
ಶಿಕ್ಷಣದ ಭಾರತೀಕರಣ :
ಶಾಲಾ ಶಿಕ್ಷಣ ಮತ್ತು ಪುಸ್ತಕವನ್ನು ಕೇಸರೀಕರಣ ಮಾಡುತ್ತಿಲ್ಲ. ಬದಲಾಗಿ ಭಾರತೀಕರಣ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಹತ್ತಾರು ರೀತಿಯಲ್ಲಿ ನಮ್ಮನ್ನು ಕೀಳಾಗಿ ನೋಡುವ ಮನಃಸ್ಥಿತಿ ಬೆಳೆದು ಬಂದಿದೆ. ಆದರೆ ಮ್ಯಾಕ್ಸ್‌ಮುಲ್ಲರ್ ತನ್ನ “ದಿ ಗ್ರೇಟ್ ಫಿಲಾಸಫಿ’ ಎಂಬ ಗ್ರಂಥದ 12 ಸಂಪುಟಗಳಲ್ಲಿಯೂ ಜ್ಞಾನ-ವಿಜ್ಞಾನದಲ್ಲಿ ಭಾರತದ ಪಾತ್ರವೇನೆಂದು ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ತಿಳಿದು ನಮ್ಮ ಪಠ್ಯದಲ್ಲಿ ವಿಜ್ಞಾನ, ಗಣಿತ, ತತ್ತÌಶಾಸ್ತ್ರ, ಯೋಗದಲ್ಲಿ ಭಾರತೀಯರ ಆಳವಾದ ಜ್ಞಾನಭಂಡಾರವನ್ನು ತಿಳಿಸಲಾಗುತ್ತಿದೆ.
800 ಪೊಸಿಷನ್ ಪೇಪರ್ :
ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಒಪ್ಪಿಗೆ ನೀಡಿರುವ ವಿವಿಧ ರಾಜ್ಯಗಳು ಕೇಂದ್ರ ಸರಕಾರಕ್ಕೆ ಒಟ್ಟು 800 “ಪೊಸಿಷನ್ ಪೇಪರ್’ಗಳನ್ನು ಸಲ್ಲಿಸಿವೆ. ಕರ್ನಾಟಕದಿಂದಲೂ ಕಾರ್ಯಪಡೆ 26 ಪೇಪರ್‌ಗಳನ್ನು ಸಲ್ಲಿಸಿದೆ. ಇವುಗಳನ್ನು ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.
- ಎನ್.ಎಲ್. ಶಿವಮಾದು