ತಿ.ನರಸೀಪುರ: ತಾಲೂಕಿನ ಚಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ವೈ.ರಂಗಸ್ವಾಮಿ, ಉಪಾಧ್ಯಕ್ಷರಾಗಿ ಚನ್ನಮಲ್ಲು ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದಿನ ಅಧ್ಯಕ್ಷ ಬಿ.ವಿ.ವೆಂಕಟೇಗೌಡ ಹಾಗೂ ಉಪಾಧ್ಯಕ್ಷೆ ಪದ್ಮಮ್ಮ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಿ.ವೈ.ರಂಗಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಮಲ್ಲು ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಸಂಘದ 11 ಮಂದಿ ನಿರ್ದೇಶಕರಲ್ಲಿ 9 ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು. ಚುನಾವಣಾಧಿಕಾರಿಯಾಗಿ ಎಂಡಿಸಿಸಿ ಬ್ಯಾಂಕ್‌ನ ರವಿ ಕಾರ್ಯನಿರ್ವಹಿಸಿದರು. ಆಯ್ಕೆ ಪ್ರಕ್ರಿಯೆಯ ನಂತರ ನಿರ್ದೇಶಕರು, ಷೇರುದಾರ ಸದಸ್ಯರು ಹಾಗೂ ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸಲಾಯಿತು.
ನಿರ್ವಹಣೆ ಸುಭದ್ರವಾಗಿರಲಿ: ತಾಲೂಕಿನಲ್ಲಿ ಉತ್ತಮ ಹೆಸರು ಗಳಿಸಿರುವ ಚಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ವಹಣೆ ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಮೂಲಕ ರೈತರಿಗೆ ಉತ್ತಮ ಸೇವೆಗಳನ್ನು ಸಲ್ಲಿಸಬೇಕು. ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಪûಾತೀತವಾಗಿ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಸಲಹೆ ನೀಡಿದರು.
ರೈತ ಸೇವೆಗೆ ಸಹಕಾರಿ: ತಾಲೂಕಿನ ಚಾಮನಹಳ್ಳಿನ ನಿವಾಸದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಂದ ಸನ್ಮಾನ ಹಾಗೂ ಕೃತಜ್ಞತೆಗಳನ್ನು ಸ್ವೀಕರಿಸಿ ಮಾತನಾಡಿ, ಸಂಘಟನೆಯನ್ನು ಕ್ರೂಡೀಕರಿಸಿ ರೈತಪರ ಸೇವೆಯನ್ನು ಸಲ್ಲಿಸಲು ಸಹಕಾರಿ ಕ್ಷೇತ್ರ ಯೋಗ್ಯವಾಗಿರುವುದರಿಂದ ಸಹಕಾರಿಗಳ ನಡುವಿನ ಒಗ್ಗಟ್ಟು ಭದ್ರವಾಗಿರಲಿ ಎಂದು ಕಿವಿಮಾತು ಹೇಳಿದರು.
ಮಾಜಿ ಅಧ್ಯಕ್ಷರಾದ ಬಿ.ವಿ.ವೆಂಕಟೇಗೌಡ, ಚಾಮೇಗೌಡ, ಸಿ.ಚಾಮು, ಮಾಜಿ ಉಪಾಧ್ಯಕ್ಷೆ ಪದ್ಮಮ್ಮ, ನಿರ್ದೇಶಕರಾದ ಲಕ್ಷ್ಮಮ್ಮ, ಎಂ.ಪ್ರವೀಣ್‌ಕುಮಾರ್, ನಿಂಗರಾಜು, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಹೆಚ್.ಎಸ್.ಕೃಷ್ಣ, ಮುಖಂಡರಾದ ಸಿ.ಎಂ.ಶಶಿಭೂಷಣ್, ಸಿ.ಎಸ್.ಸತೀಶ್, ಹನುಮನಾಳು ದಯಾನಂದಕುಮಾರ್,
ಮಾದೇಗೌಡ, ಯಡಹಳ್ಳಿ ಪುಟ್ಟರಂಗಣ್ಣ, ಡಿ.ಸಿ.ನಾಗೇಂದ್ರ, ಮೀಸೆ ರಂಗಸ್ವಾಮಿ, ಮಹದೇವಣ್ಣ, ರಾಮಣ್ಣ, ಎಸ್.ಸಿ.ಪ್ರಕಾಶ್, ಜಗದೀಶ್, ಸಿದ್ದೇಗೌಡ, ವರದರಾಜು, ಸಂಘದ ಗುಮ್ಮಾಸ್ತ ಸಿ.ಪಿ.ಮಹದೇವ, ಸಿಬ್ಬಂಧಿಗಳಾದ ಮಂಚೇಗೌಡ, ಸಿ.ಆರ್.ಕೃಷ್ಣಮೂರ್ತಿ ಹಾಗೂ ಇನ್ನಿತರರು ಹಾಜರಿದ್ದರು.