Advertisement

ಮದುವೆ “ಬೇಡಿ’

10:43 AM Jul 07, 2019 | Vishnu Das |

ಈ ಊರಿನಲ್ಲಿ ಮದುವೆಯಾದ ಮರುಕ್ಷಣವೇ ಗಂಡಸರು ಕಾಲಿಗೆ ಬೇಡಿ ತೊಟ್ಟುಕೊಳ್ಳುತ್ತಾರೆ! ಮಹಿಳೆಯರು ಹೂವಿನ ಬೇಡಿ ತೊಟ್ಟುಕೊಂಡು,ಸುಖಬಂಧನಕ್ಕೆ ಸಾಕ್ಷಿ ಆಗುವರು!

Advertisement

ಮದುವೆಯನ್ನು ಅನೇಕರು ಬಂಧನಕ್ಕೆ ಹೋಲಿಸುವು ದುಂಟು.ಬ್ರಹ್ಮ ಚಾರಿ ಹಂತ ದಲ್ಲಿ ಇದ್ದಂಥ ಸ್ವಾತಂತ್ರ್ಯ, ವೈವಾಹಿಕ ಬದುಕಿನಲ್ಲಿ ದಕ್ಕುವುದಿಲ್ಲ ಎನ್ನು ವುದು ಇದರ ಅರ್ಥ ಇದ್ದಿರಬಹುದು. ಈ ವ್ಯಾಖ್ಯಾನವನ್ನು ಯಥಾವತ್ತು ಪಾಲಿಸುವ ಇಲ್ಲೊಂದು ಆಚ ರಣೆ,ನಿಮ್ಮ ಮೂಗಿನ ಮೇಲೂ ಬೆರಳಿಡುವಂತೆ ಮಾಡುತ್ತದೆ.ಈ ಊರಿನಲ್ಲಿ ಮದುವೆಯಾದ ಮರು ಕ್ಷಣವೇ ಮುಜಾವರ ವಂಶದ ಗಂಡ ಸರು ಕಾಲಿಗೆ ಬೇಡಿ ತೊಟ್ಟುಕೊಳ್ಳುತ್ತಾರೆ! ಮಹಿಳೆಯರು ಹೂವಿನ ಬೇಡಿ ತೊಟ್ಟುಕೊಂಡು,ಸುಖ ಬಂಧನಕ್ಕೆ ಸಾಕ್ಷಿ ಆಗುವರು!

ಇಂಥ ದ್ದೊಂದು ವಿಸ್ಮಯದ ಆಚ ರಣೆ ಕಂಡಿದ್ದು, ವಿಜಯ ಪುರ ಜಿಲ್ಲೆಯ ಯಂಕಂಚಿ ಗ್ರಾಮದ ದಾವಲ್‌ ಮಲಿಕ್‌ ದರ್ಗಾದಲ್ಲಿ. ವರ ಮತ್ತು ಆತನ ಮನೆಯವರು ಕಾಲಿಗೆ ಬೇಡಿ ತೊಟ್ಟು ಹರಕೆ ಸಲ್ಲಿಸುತ್ತಾರೆ. ದೇವರ ಅನುಗ್ರಹದ ಸಂಕೇತವಾಗಿ ಬೇಡಿ ಕಳಚಿದ ನಂತರ ಪ್ರಾರ್ಥನೆ ಸಲ್ಲಿಸಿ, ಮನೆಗೆ ತೆರಳುತ್ತಾರೆ.

ಯಾಕೆ ಹೀಗೆ ಬೇಡಿ ಧರಿಸುತ್ತಾರೆ ಎಂಬುದಕ್ಕೆ ಕಾರಣ ಹುಡುಕಿದರೆ, ಇತಿಹಾಸದ ಘಟನೆಯೊಂದು ಧುತ್ತನೆ ಬಂದು ಎದುರಿಗೆ ನಿಲ್ಲುತ್ತದೆ. ಅದು 1920ರ ಸುಮಾರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಕರ ಸಂಗ್ರಹವು ಕಲಾದಗಿಯಲ್ಲಿ ನಡೆದಿತ್ತು. ತೆರಿಗೆ ಕಟ್ಟದವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುತ್ತಿದ್ದರು, ಬ್ರಿಟಿಷರು. ಆಂಗ್ಲರ ಈ ದಬ್ಟಾಳಿಕೆ ವಿರುದ್ಧ ಕೊನೆಗೂ ಒಬ್ಬ ದನಿ ಎತ್ತಿದ್ದ. ಆತನೇ ಯಂಕಂಚಿ ಗ್ರಾಮದ ಜಾಂಜಪ್ಪ ಮುತ್ತ್ಯಾ.

Advertisement

ಬ್ರಿಟಿಷರು ಯಂಕಂಚಿ ಗ್ರಾಮದ ಮುಖಂಡರಾದ ಊರಿನಗೌಡ ಮತ್ತು ಕುಲಕರ್ಣಿಯನ್ನು ಬಂಧಿಸಿ ಕಲಾದಗಿಗೆ ಒಯ್ಯುತ್ತಾರೆ. ಇದನ್ನು ಕೇಳಿ, ಜಾಂಜಪ್ಪ ಮುತ್ತ್ಯಾನು ಊರ ಜನರನ್ನು ಕ ಟ್ಟಿ ಕೊಂಡು, ಬಂಧಿ ತ ರನ್ನು ನೋಡಲು ಹೋಗುತ್ತಾನೆ. ಅಷ್ಟರಲ್ಲಿಯೇ ಬ್ರಿಟೀಷರು ಪ್ರಮುಖರಿಗೆ ಬೇಡಿ ತೊಡಿ ಸು ತ್ತಾರೆ. ಇದನ್ನು ಕಂಡ ಜಾಂಜಪ್ಪ ಮುತ್ತ್ಯಾ , ದಾವಲ್‌ ಮಲಿಕ್‌ ದರ್ಗಾಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾನೆ. “ಬ್ರಿಟಿಷರು ಹಾಕಿದ ಬೇಡಿ ಕಳಚಲಿ, ಹಾಗೆ ಕಳಚಿದರೆ ನಾನು ನಿನ್ನ ಹೆಸರಿನಲ್ಲಿ ಬೇಡಿ ತೊಡುವೆ’ ಎಂದು ಹರಕೆ ಹೊತ್ತುಕೊಳ್ಳುತ್ತಾನೆ. ಕೆಲವೇ ದಿನಗಳಲ್ಲಿ ಪವಾಡವೆಂಬಂತೆ, ಊರ ಪ್ರಮುಖರಿಗೆ ಬ್ರಿಟಿ ಷರು ತೊಡಿ ಸಿದ ಬೇಡಿ, ಕಳಚುತ್ತದೆ. ಇದನ್ನು ನೋಡಿ, ಬ್ರಿಟಿಷರು ಕಂಗಾಲಾಗಿ, ಊರು ಬಿಡುತ್ತಾ ರೆ. ಜಾಂಜಪ್ಪ ಮುತ್ತ್ಯಾ ಅವರ ವಂಶಸ್ಥರು ಇವ ತ್ತಿಗೂ ಅಂದಿನ ನಂಬಿಕೆ ಯನ್ನು, ಆಚ ರ ಣೆಯ ರೂಪ ದಲ್ಲಿ ಅನು ಸರಿಸುತ್ತಿದ್ದಾರೆ. ದುಂಡಪ್ಪ ಮುಜಾವರ, ಅರ್ಜುನ ಮುಜಾವರ, ನಾಗಣ್ಣ ಮುಜಾವರ, ಶಿವಾನಂದ ಮುಜಾವರ, ಪರಶುರಾಮ ಮುಜಾವರ, ಶಿವಪ್ಪ ಮುಜಾವರ, ಯಲ್ಲಾಲಿಂಗ ಮುಜಾವರ- ಹೀಗೆ ಈ ಕುಟುಂಬದ ಸದಸ್ಯರು ಬೇಡಿ ಧರಿಸುವ ಪದ್ಧತಿ ಅನುಸರಿಸಿಕೊಂಡು ಬಂದಿದ್ದಾರೆ.

ಅಂದ ಹಾಗೆ, ಹೀಗೆ ಬೇಡಿ ಧರಿಸುವವರು ಪ್ರತಿ ಮುಂಜಾನೆ ಊರಿನಲ್ಲಿ ಭಿಕ್ಷೆ ಬೇಡಿ, ಜನರು ಕೊಟ್ಟ ಆಹಾರವೇ ಪ್ರಸಾದವೆಂದು ಸ್ವೀಕರಿಸುತ್ತಾರೆ. ಬೇಡಿ ಧರಿಸಿದ ಒಂದೆರಡು ವಾರದಲ್ಲಿ ಅದು ಕಳಚಿಕೊಳ್ಳುತ್ತದೆ!

ಯಶಸ್ವಿ ದೇವಾಡಿಗ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next