Advertisement
ನಗರದ ಪ್ರದೇಶಗಳಲ್ಲಿ ಹೆಚ್ಚಾಗಿದ್ದ ಸರಗಳ್ಳತನ ಪ್ರಕರಣ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆಇಟ್ಟಿದ್ದು ಒಂಟಿ ಮಹಿಳೆಯರು, ದಂಪತಿಗಳನ್ನೇಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಸರಗಳ್ಳರು ಬೀಡು ಬಿಟ್ಟಿರುವ ಶಂಕೆ? :
ಸರಗಳ್ಳತನ ಮಾಡಲು ತಂಡವೊಂದು ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಳವಳ್ಳಿಯ ಬಳಿ ದಂಪತಿ ಅಡ್ಡಗಟ್ಟಿ ಸರಕಸಿದು ಪರಾರಿಯಾಗುತ್ತಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ವಿರೋಧ ವ್ಯಕ್ತಪಡಿಸಿದವರಿಗೆ ಚಾಕು ತೋರಿಸಿ ಹಲ್ಲೆ ನಡೆಸಿರುವ ಘಟನೆಗಳು ನಡೆಯುತ್ತಿರುವುದು ಆತಂಕ ತಂದಿದೆ. ಸರಗಳ್ಳರ ತಂಡವನ್ನು ಪತ್ತೆ ಹಚ್ಚಿ ಮಹಿಳೆಯರು, ವೃದ್ಧೆಯರು ನಿರ್ಭಯವಾಗಿ ಓಡಾಡುವ ವಾತಾವರಣ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರ ಗಸ್ತು ಹೆಚ್ಚಳ :
ಮಂಡ್ಯ ನಗರ ಸೇರಿ ಜಿಲ್ಲೆಯ ತಾಲೂಕು ಕೇಂದ್ರ, ಘಟನೆ ನಡೆದ ಗ್ರಾಮೀಣ ಪ್ರದೇಶಗಳಲ್ಲೂ ಸರಗಳ್ಳರ ಪತ್ತೆ, ಪ್ರಕರಣ ನಿಯಂತ್ರಣಕ್ಕೆ ಗಸ್ತಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯ ನಗರದ ಕಲ್ಲಹಳ್ಳಿ, ಬಾಲಕರ ಕಾಲೇಜು, ಜಯಚಾಮರಾಜೇಂದ್ರ ವೃತ್ತ, ನಂದ ವೃತ್ತ, ಕಾಳಿಕಾಂಬ ದೇವಾಲಯ, ನೂರಡಿರಸ್ತೆ, ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳಾದ ಬೆಂಗಳೂರು-ಮೈಸೂರು ಹೆದ್ದಾರಿಯ ವಿ.ಸಿ.ಫಾರಂ ರಸ್ತೆ, ಕಿರಂಗೂರು ರಸ್ತೆ, ಉಮ್ಮಡಹಳ್ಳಿ ಗೇಟ್, ಮೈಷುಗರ್-ಅಸಿಟೇಟ್ ಟೌನ್ ಸಂಪರ್ಕ ರಸ್ತೆ, ಉಮ್ಮಡಹಳ್ಳಿ ಸಾತನೂರು ರಸ್ತೆ, ಅರಕೇಶ್ವರ ದೇವಾಲಯದ ತಿರುವು, ಹನಿಯಂಬಾಡಿ ರಸ್ತೆ, ಬನ್ನೂರು ರಸ್ತೆ, ಸಂತೆ ಕಸಲಗೆರೆ ರಸ್ತೆ, ಹೊಳಲು ವೃತ್ತ ಹಾಗೂ ಚಿಕ್ಕಮಂಡ್ಯ ರಸ್ತೆ, ಸಾತನೂರು ಬೆಟ್ಟ, ಮಳವಳ್ಳಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಅಲ್ಲದೆ, ನಗರಕ್ಕೆ ಬರುವ ಬೈಕ್ ಸವಾರರನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ.
ಮರ್ಯಾದೆಗೆ ಅಂಜಿ ಬೆಳಕಿಗೆ ಬಾರದ ಹಲವು ಪ್ರಕರಣ :
ಮಳವಳ್ಳಿ ತಾಲೂಕಿನ ಮುತ್ತತ್ತಿ, ಶಿಂಷಾ ರಸ್ತೆಗಳಲ್ಲಿ ಪ್ರೇಮಿಗಳು ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗಿರುವುದರಿಂದ ಆ ರಸ್ತೆಯಲ್ಲಿ ಬರುವ ಜೋಡಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಲಾಗುತ್ತಿದೆ. ಕೆಲವರು ಪೊಲೀಸರಿಗೆ ದೂರು ನೀಡಿದರೆ, ಮತ್ತೆ ಕೆಲವರು ಮರ್ಯಾದೆ ದೃಷ್ಟಿಯಿಂದ ದೂರು ನೀಡುತ್ತಿಲ್ಲ ಎಂಬ ಮಾತುಗಳೂ ಸ್ಥಳೀಯರಿಂದ ಕೇಳಿ ಬರುತ್ತಿವೆ.
ಸರಗಳ್ಳತನ ಪ್ರಕರಣ ಗಳು ನಡೆದಿದ್ದು, ಆರೋಪಿಗಳ ಪತ್ತೆಗೆಕ್ರಮ ವಹಿಸಲಾಗುತ್ತಿದೆ.ಸರಗಳ್ಳರ ಪತ್ತೆಗೆ ಆಯಾಕಟ್ಟಿನಜಾಗಗಳಲ್ಲಿ ಪೊಲೀಸ್ ಗಸ್ತಿಗೆ ನಿಯೋಜಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮವಹಿಸಲಾಗುವುದು. – ಡಾ.ಎಂ.ಅಶ್ವಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ