Advertisement
ಕುಸುಮಾ ಅವರು ಕಲ್ಲಾಪುವಿನ ತನ್ನ ಮನೆಯಿಂದ ಪಡುಪಣಂಬೂರು ಗ್ರಾಮ ಪಂಚಾಯತ್‌ಗೆ ಒಳ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಬೈಕ್‌ನಲ್ಲಿ ಇಬ್ಬರು ಬಂದು ವಿಳಾಸವನ್ನು ಕೇಳಿದ್ದಾರೆ. ವಿಳಾಸ ಹೇಳುವಾಗಲೇ ಹಿಂದೆ ಕುಳಿತಿದ್ದ ಸಹ ಸವಾರ ಕುಸುಮಾ ಅವರ ಕುತ್ತಿಗೆಯಲ್ಲಿದ್ದ 4.5 ಪವನ್‌ನ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.ಘಟನೆ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.