Advertisement
ಗ್ರಾ.ಪಂ. ಅಧ್ಯಕ್ಷನ ಹತ್ಯೆ: ಮಧ್ಯ ಪ್ರದೇಶದ ಬಲ್ವಾರಿ ಕಲಾ ಪಂಚಾಯಿತಿ ಅಧ್ಯಕ್ಷ, ಸ್ಥಳೀಯ ಕಾಂಗ್ರೆಸ್ ನಾಯಕ ನಜರು ಬಿಲ್ ಎಂಬುವರನ್ನು ಕಲ್ಲು ಹೊಡೆದು ಮತ್ತು ಬಾಣದಿಂದ ಚುಚ್ಚಿ ಕೊಲ್ಲಲಾಗಿದೆ. ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದಲ್ಲಿ ಈ ಸಾಲಿನಲ್ಲಿ ನಡೆದ ಮೊದಲ ರಾಜಕೀಯ ಹತ್ಯೆ ಇದಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ನಾಯಕ ಸೂರಜ್ ಎಂಬಾತನೇ ಈ ಕೃತ್ಯಕ್ಕೆ ಕಾರಣ ಎಂದು ಎಸ್‌ಪಿ ಬೀರೇಂದ್ರ ಸಿಂಗ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 21 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಗ್ರಾಮ ಪಂಚಾಯಿತಿ ಗಂಧ್ವಾನಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, 2008, 2013ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಮಧ್ಯಪ್ರದೇಶದ ಜಬುವಾ ಜಿಲ್ಲಾಡಳಿತ “ಮತ ಚಲಾವಣೆ ನಮ್ಮ ಹಕ್ಕು; ಅದಕ್ಕಾಗಿ ಪ್ರತಿಜ್ಞಾ ಬದ್ಧರಾಗಿದ್ದೇವೆ’ ಎಂಬ ಅರಿವು ಮೂಡಿಸುವ 2 ಲಕ್ಷ ಸ್ಟಿಕ್ಕರ್‌ಗಳನ್ನು ಮುದ್ರಿಸಿತ್ತು. ಮನೆ, ಸಾರ್ವಜನಿಕ ಕಟ್ಟಡಗಳ ಬಾಗಿಲಿಗೆ ಅಂಟಿಸಲಾಗಿತ್ತು. ಮದ್ಯದ ಬಾಟಲಿಗೆ ಅದನ್ನು ಅಂಟಿಸಿ ಅರಿವು ಮೂಡಿಸಲೂ ನಿರ್ಧರಿಸಲಾಗಿತ್ತು. ಆದರೆ ಮದ್ಯ ಸೇವನೆಯಿಂದ ಉಂಟಾಗುವ ಹಾನಿಯ ಎಚ್ಚರಿಕೆಯ ಮೇಲೆಯೇ ಸ್ಟಿಕ್ಕರ್ ಅಂಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಬಾಟಲ್‌ಗಳ ಮೇಲೆ ಸ್ಟಿಕ್ಕರ್ ಬೇಡ ಎಂದು ಜಿಲ್ಲಾಡಳಿತ ತೀರ್ಮಾನಿಸಿದೆ.