ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಹರಿಣಗಳು ಸರಣಿ ಸೋತರು ಅಂತಿಮ ಪಂದ್ಯದಲ್ಲಿ ಗೆದ್ದು, ಏಕದಿನ ಸರಣಿಗೆ ಮುಂಚಿತವಾಗಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೇಳೆ ಸಿರಾಜ್ ವಿರುದ್ಧ ದೀಪಕ್ ಚಾಹರ್ ಕಿಡಿಕಾರಿದ ಘಟನೆ ನಡೆಯಿತು. ಅಂತಿಮ ಓವರ್ ನಲ್ಲಿ ಸತತ ಸಿಕ್ಸರ್ ಬಾರಿಸಿ ಮಿಲ್ಲರ್ ಚಾಹರ್ ಎಸೆದ ಐದನೇ ಎಸೆತವನ್ನು ದೂರಕ್ಕೆ ಬಾರಿಸಿದರು. ಡೀಪ್ ಸ್ಕ್ವೇರ್ ಲೆಗ್ ನಲ್ಲಿದ್ದ ಸಿರಾಜ್ ಚೆಂಡನ್ನು ಹಿಡಿದರು. ಆದರೆ ಈ ವೇಲೆ ಸಿರಾಜ್ ಕಾಲು ಬೌಂಡರಿ ಗೆರೆಗೆ ತಾಗಿತ್ತು. ಇದರಿಂದ ಕೋಪಗೊಂಡ ದೀಪಕ್ ಚಾಹರ್ ಮೈದಾನದಲ್ಲಿ ನಿಂದಿಸಿದರು.
ಇದನ್ನೂ ಓದಿ:ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ಸಾಧ್ಯವಿಲ್ಲ: ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಮೊದಲೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರೈಲಿ ರುಸ್ಸೋ ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. 48 ಎಸೆತಗಳಲ್ಲಿ ರುಸ್ಸೋ 100 ರನ್ ಗಳಿಸಿದರೆ, ಕ್ವಿಂಟನ್ ಡಿಕಾಕ್ 63 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಭಾರತ ತಂಡವು 18.3 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟಾಯಿತು. ದಿನೇಶ್ ಕಾರ್ತಿಕ್ 46 ರನ್, ದೀಪಕ್ ಚಾಹರ್ 31 ರನ್ ಮತ್ತು ಕೀಪರ್ ಪಂತ್ 27 ರನ್ ಗಳಿಸಿದರು. ಆಫ್ರಿಕಾ ಪರ ಪ್ರೆಟೋರಿಯಸ್ ಮೂರು, ಪಾರ್ನೆಲ್, ಎನ್ ಗಿಡಿ, ಕೇಶವ್ ಮಹರಾಜ್ ತಲಾ ಎರಡು ವಿಕೆಟ್ ಕಿತ್ತರು.