Advertisement
1. ಚಗತೆ ತಂಬುಳಿ:ಬೇಕಾಗುವ ಸಾಮಗ್ರಿ: ಎಳೆಯ ಚಗತೆಸೊಪ್ಪು-ಒಂದು ಹಿಡಿ, ತೆಂಗಿನತುರಿ- 1/2 ಕಪ್, ಹಸಿರುಮೆಣಸು-1, ಕಾಳುಮೆಣಸು-ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಮೊಸರು/ ಮಜ್ಜಿಗೆ- 2 ಕಪ್, ಉಪ್ಪು, ಒಗ್ಗರಣೆಗೆ : ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.
ಬೇಕಾಗುವ ಸಾಮಗ್ರಿ: ಎಳೆಯ ಚಗತೆಸೊಪ್ಪು- ಅರ್ಧ ಕಪ್, ಟೊಮ್ಯಾಟೋ-2, ಈರುಳ್ಳಿ -1, ಸಾರಿನ ಪುಡಿ-1 ಚಮಚ, ಬೆಂದ ತೊಗರಿಬೇಳೆ- ಅರ್ಧ ಕಪ್, ಹುಣಸೆ ರಸ- ಸ್ವಲ್ಪ, ಉಪ್ಪು, ಚಿಟಿಕೆ ಬೆಲ್ಲ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ- ಎಣ್ಣೆ, ಸಾಸಿವೆ, ಕರಿಬೇವು, ಇಂಗು ಅಥವಾ ಬೆಳ್ಳುಳ್ಳಿ
Related Articles
Advertisement
3. ಚಗತೆ ಪಲಾವ್ ಬೇಕಾಗುವ ಸಾಮಗ್ರಿಗಳು: ಅಕ್ಕಿ- 1 ಕಪ್, ನೀರು- 3 ಕಪ್, ಹೆಚ್ಚಿದ ತರಕಾರಿಗಳು- 3 ಕಪ್, ಗೋಡಂಬಿ, ಚಗತೆಸೊಪ್ಪು- ಒಂದು ಕಪ್, ಚಕ್ಕೆ, ಶುಂಠಿ, ಲವಂಗ, ಬೆಳ್ಳುಳ್ಳಿ- 4 ಎಸಳು, ತೆಂಗಿನ ತುರಿ – ಕಾಲು ಕಪ್, ಎಣ್ಣೆ- ನಾಲ್ಕು ಚಮಚ, ಉಪ್ಪು. ಮಾಡುವ ವಿಧಾನ: ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ಈರುಳ್ಳಿ ಮೊದಲಾದ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಜೊತೆಗೆ ಗೋಡಂಬಿ ಸೇರಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಚಗತೆಸೊಪ್ಪನ್ನು ಬಾಡಿಸಿ. ಇದಕ್ಕೆ ಮಸಾಲೆ ವಸ್ತುಗಳನ್ನೂ, ತೆಂಗಿನ ತುರಿಯನ್ನೂ ಸೇರಿಸಿ ತರಿತರಿಯಾಗಿ ರುಬ್ಬಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ, ರುಬ್ಬಿದ ಮಸಾಲೆಯನ್ನು ಹಸಿವಾಸನೆ ಹೋಗುವಷ್ಟು ಹುರಿಯಿರಿ. ಅದೇ ಕುಕ್ಕರ್‌ಗೆ ಹೆಚ್ಚಿದ ತರಕಾರಿಗಳು ಮತ್ತು ತೊಳೆದ ಅಕ್ಕಿಯನ್ನು ಹಾಕಿ, 3 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೌಟಿನಲ್ಲಿ ಕೈಯಾಡಿಸಿ, ಮೂರು ವಿಷಲ್ ಬರುವಷ್ಟು ಬೇಯಿಸಿದರೆ ಪಲಾವ್ ರೆಡಿ. 4.ಚಗತೆ ಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿ: ಕುಸುಬಲಕ್ಕಿ – 2 ಕಪ್, ಚಗತೆಸೊಪ್ಪು- 3 ಕಪ್, ತೆಂಗಿನತುರಿ- ಅರ್ಧ ಕಪ್, ಒಣಮೆಣಸು- 4, ಕೊತ್ತಂಬರಿ ಬೀಜ- 2 ಚಮಚ, ಜೀರಿಗೆ- ಅರ್ಧ ಚಮಚ, ಚಿಟಿಕೆ ಇಂಗು, ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಾಡಿಸಿದ ಬಾಳೆಲೆ. ಮಾಡುವ ವಿಧಾನ: ಕುಸುಬಲಕ್ಕಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಿ. ಚಗತೆ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ. ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಇಂಗನ್ನು ಹುರಿಯಿರಿ. ನೆನೆದ ಅಕ್ಕಿಗೆ, ತೆಂಗಿನ ತುರಿ, ಹುಣಸೆಹಣ್ಣು ಹಾಗೂ ಹುರಿದ ಮಸಾಲೆ ಸೇರಿಸಿ, ಸ್ವಲ್ಪ ನೀರು ಸೇರಿಸಿ ಇಡ್ಲಿಯ ಹದಕ್ಕೆ ರುಬ್ಬಿ. ಅದಕೆ Rಉಪ್ಪು ಹಾಗೂ ಚಗತೆ ಸೊಪ್ಪನ್ನು ಸೇರಿಸಿ. ಹಿಟ್ಟನ್ನು ಬಾಳೆಲೆಯ ಮಧ್ಯಕ್ಕೆ ಸುರಿದು, ಎಲೆಯ ನಾಲ್ಕೂ ಅಂಚುಗಳನ್ನು ಮಡಚಿ. ಮಡಚಿದ ಬಾಳೆಲೆಯ ಅಂಚುಗಳು ಬಿಚ್ಚದಂತೆ, ಇಡ್ಲಿಪಾತ್ರೆ/ಕುಕ್ಕರ್‌ನಲ್ಲಿ ಒಂದರ ಮೇಲೊಂದು ಜೋಡಿಸಿ. ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ.(ಇಡ್ಲಿಯ ಅಚ್ಚಿನಲ್ಲಿಯೂ ಬೇಯಿಸಬಹುದು) (ಬಿಸಿ ಪತ್ರೊಡೆಗೆ ತುಪ್ಪ, ಜೋನಿಬೆಲ್ಲ, ಚಟ್ನಿ ನೆಂಚಿಕೊಂಡು ಸವಿಯಬಹುದು. ಪತ್ರೊಡೆಯನ್ನು ಪುಡಿ ಮಾಡಿ, ಹಸಿಮೆಣಸು, ಈರುಳ್ಳಿ, ಕಾಯಿತುರಿ ಹಾಕಿ ಒಗ್ಗರಣೆ ಕೊಡಬಹುದು. ಸಿಹಿ ಇಷ್ಟವಿದ್ದರೆ ಕಾಯಿ-ಬೆಲ್ಲ ಸೇರಿಸಿ ಒಗ್ಗರಣೆ ಮಾಡಿದರೂ ರುಚಿಯಾಗಿರುತ್ತೆ.) -ಹೇಮಮಾಲಾ.ಬಿ, ಮೈಸೂರು