Advertisement

ಹಾಡಲ್ಲಿ ಎಂಟ್ರಿ ಕೊಟ್ರಾ ಚಡ್ಡಿದೋಸ್ತ್ ಗಳು

10:08 AM Jan 15, 2021 | Team Udayavani |

ಆಸ್ಕರ್‌ ಕೃಷ್ಣ, ಲೋಕೇಂದ್ರ ಸೂರ್ಯ, ಸೆವೆನ್‌ ರಾಜ್‌, ಗೌರಿ ನಾಯರ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ, “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

“ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟಿ ಪ್ರೇಮಾ, ನಿರ್ಮಾಪಕ ಎಸ್.ಎ ಚಿನ್ನೇಗೌಡ, ಭಾ.ಮಾ ಹರೀಶ್‌, ಭಾ.ಮಾ ಗಿರೀಶ್‌, ನಟ ರವಿಚೇತನ್‌, ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌, ಉಮೇಶ್‌ ಬಣಕಾರ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ಹಾಡುಗಳನ್ನು ಹೊರತಂದರು

“ರೆಡ್‌ ಅಂಡ್‌ ವೈಟ್‌’ ಖ್ಯಾತಿಯ ಸೆವೆನ್‌ ರಾಜ್‌ ನಿರ್ಮಾಣದಲ್ಲಿ ಮೂಡಿಬಂದಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಚಿತ್ರಕಥೆ, ಸಂಭಾಷಣೆ ಇದೆ. ಚಿತ್ರಕ್ಕೆ ಆಸ್ಕರ್‌ ಕೃಷ್ಣ ನಿರ್ದೇಶನವಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆಸ್ಕರ್‌ ಕೃಷ್ಣ, “ಇದು ನನ್ನ ನಿರ್ದೇಶನದ ಐದನೇ ಸಿನಿಮಾ. ಇದೇ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ.

ಇದೊಂದು ಕ್ರೈಂ-ಥ್ರಿಲ್ಲರ್‌ ಕಥಾಹಂದರವಿರುವ ಸಿನಿಮಾ. ಲೋಕೇಂದ್ರ ಸೂರ್ಯ ಸಿನಿಮಾಕ್ಕೆ ಈ ಟೈಟಲ್‌ ಕೊಟ್ಟರು. ಸಿನಿಮಾದ ಸಬೆjಕ್ಟ್, ಕಂಟೆಂಟ್‌ ಎರಡಕ್ಕೂ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಇದನ್ನೇ ಟೈಟಲ್‌ ಆಗಿ ಇಟ್ಟುಕೊಂಡಿದ್ದೇವೆ.

ಇದನ್ನೂ ಓದಿ:ನಿಖೀಲ್‌ ಬರ್ತ್‌ಡೇಗೆ ಬರಲಿದೆ ‘ರೈಡರ್‌’ ಟೀಸರ್

Advertisement

ಇಬ್ಬರು ಸ್ನೇಹಿತರ ಸ್ನೇಹ-ಸಂಬಂಧ, ಅದರ ನಡುವೆ ನಡೆಯುವ ಹುಡುಗಾಟ, ತುಂಟಾಟ ಎಲ್ಲವೂ ಇದರಲ್ಲಿದೆ. ಇಲ್ಲಿ ಪೋಲಿಸ್‌, ರಾಜಕೀಯ, ವ್ಯವಸ್ಥೆ ಎಲ್ಲವೂ ಇದೆ. ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ. ಅದೇ ಥರದಲ್ಲೇ ಈ ಸಿನಿಮಾದ ಕಥೆ ಸಾಗುತ್ತದೆ. ಸದ್ಯ ಸಿನಿಮಾದ ಬಹುತೇಕ ಕೆಲಸ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ರಿಲೀಸ್‌ ಆಗಲಿದೆ’ ಎಂದು ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ಮಾತನಾಡಿದ ಮತ್ತೂಬ್ಬ ನಾಯಕ ನಟ ಲೋಕೇಂದ್ರ ಸೂರ್ಯ, “ಕನ್ನಡದ ಮಟ್ಟಿಗೆ ಇದೊಂದು ಹೊಸಥರದ ಸಿನಿಮಾವಾಗಲಿದೆ. ಸಿನಿಮಾದಲ್ಲಿ ಸಾಕಷ್ಟು ಕುತೂಹಲ, ತಿರುವುಗಳು ಇರುವುದರಿಂದ ಕಥೆಯ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಈ ಸಿನಿಮಾದಲ್ಲಿ ನಾನು ಗಡಾರಿ ಎನ್ನುವ ಪಾತ್ರದಲ್ಲಿ ಮತ್ತು ಆಸ್ಕರ್‌ ಕೃಷ್ಣ ಫ್ಯಾಷನ್‌ ರಾಜ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಟಿ ಗೌರಿ ನಾಯರ್‌, ನಿರ್ಮಾಪಕ ಕಂ ಖಳನಟ ಸೆವೆನ್‌ ರಾಜ್‌, ಸಂಗೀತ ನಿರ್ದೇಶಕ ಅನಂತ್‌ ಆರ್ಯನ್‌ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ’ ಚಿತ್ರದ ಬಗ್ಗೆ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡರು.

ಚಿತ್ರದ ಚಿತ್ರೀಕರಣವನ್ನು ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರದಲ್ಲಿ 2 ಹಾಡುಗಳಿವೆ. ಚಿತ್ರಕ್ಕೆ ಗಗನ್‌ ಕುಮಾರ್‌ ಛಾಯಾಗ್ರಹಣವಿದೆ. ಅಕುಲ್‌ ನೃತ್ಯ ಹಾಗೂ ವೈಲೆಂಟು ವೇಲು ಸಾಹಸ ಸಂಯೋಜಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next