Advertisement

Vijayapura; ಚಡಚಣ ಸಹೋದರ ಹತ್ಯಾ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಮಹದೇವ ಭೈರಗೊಂಡ, ಸಹಚರರು

05:53 PM Dec 29, 2023 | Team Udayavani |

ವಿಜಯಪುರ  ಭೀಮಾತೀರದ ಧರ್ಮರಾಜ ಚಡಚಣ ನಕಲಿ ಪೊಲೀಸ್ ಎನಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹದೇವ ಭೈರಗೊಂಡ ಹಾಗೂ ಸಹಚರರು ಶುಕ್ರವಾರ ನ್ಯಾಯಾಲದ ವಿಚಾರಣೆಗೆ ಹಾಜರಾಗಿದ್ದರು.

Advertisement

ಶುಕ್ರವಾರ ನಗರದಲ್ಲಿರುವ ವಿಜಯಪುರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯಕ್ಕೆ ಪ್ರಮುಖ ಆರೋಪಿ ಮಹಾದೇವ ಭೈರಗೊಂಡ ಸೇರಿದಂತೆ ಇತರೆ  ಆರೋಪಗಳು ವಿಚಾರಣೆಗೆ ಹಾಜರಾಗಿದ್ದರು.

ಭೀಮಾತೀರದ ಚಡಚಣ ತಾಲೂಕಿನ ಕೊಂಕಣಗಾಂವ್ ಗ್ರಾಮದ ತೋಟದಲ್ಲಿ 2017 ಅಕ್ಟೋಬರ್ 30 ರಂದು ಧರ್ಮರಾಜ ಚಡಚಣ ನಕಲಿ ಪೊಲೀಸ್ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಡ ನಿಗೂಢ ಹತ್ಯೆ ಪ್ರಕರಣದಲ್ಲಿ ಮಹಾದೇವ ಬೈರಗೊಂಡ ವಿರುದ್ಧದ ವಿಚಾರಣೆ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದೇ ಪ್ರಕರಣದಲ್ಲಿ ಮಹದೇವ ಭೈರಗೊಂಡನಿಂದ ಹಣ ಪಡೆದು ನಕಲಿ ಎನ್ಕೌಂಟರ್ ನಡೆಸಿದ ಹಾಗೂ ಹತ್ಯೆಗೆ ಸಹಕರಿಸಿದ ಪ್ರಕರಣದಲ್ಲಿ ಸಿಪಿಐ, ಪಿಎಸ್ಐ ಸೇರಿ ಒಟ್ಟು 18 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆರು ವರ್ಷಗಳ ಹಿಂದಿನ‌ ಈ ಪ್ರಕರಣದಲ್ಲಿ ಶುಕ್ರವಾರ 15 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.

Advertisement

ಪೊಲೀಸ್ ಭದ್ರತೆ:  ಜಿಲ್ಲೆಯ ಮಟ್ಟಿಗೆ ಅತ್ಯಂತ ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ಮಧ್ಯೆ ರಕ್ತಸಿಕ್ತ ಅಧ್ಯಾಯ ಇರುವ ಕಾರಣ ಶುಕ್ರವಾರ ಭೈರಗೊಂಡ ನ್ಯಾಯಾಲಯಕ್ಕೆ ಹಾಜರಾಗಿದ್ದಾಗ ಕೋರ್ಟ್ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

‌ಮಹಾದೇವ ಬೈರಗೊಂಡ, ಹಣಮಂತ ಪೂಜಾರಿ, ಅಂದು ಚಡಚಣ ಸಿಪಿಐ ಆಗಿದ್ದ‌ ಮಲ್ಲಿಕಾರ್ಜುನ್ ಅಸೋಡೆ ನಕಲಿ ಎನ್ಕೌಂಟರ್ ನಡೆಸಿದ್ದರು. ಪ್ರಕರಣದ ಆರೋಪಿಯಾಗಿದ್ದ ಅಂದಿನ ಚಡಚಣ ಪಿಎಸ್‌ಐ ಗೋಪಾಲ್ ಹಳ್ಳೂರ ಶುಕ್ರವಾರದ ವಿಚಾರಣೆಗೆ ಗೈರು ಹಾಜರಾಗಿದ್ದರು.

ವಿಚಾರಣೆ ಬಳಿಕ ನ್ಯಾಯಾಲಯದ ಆವರಣದಲ್ಲಿ ಭೈರಗೊಂಡ ಹಾಗೂ ಒತರೆ ಆರೋಪಿಗಳ ಸುತ್ತಲೂ ಸಶಸ್ತ್ರ ಪೊಲೀಸ್ ಕಾವಲು ಸಹಿತ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next