Advertisement

ಯೋಗ ದಿನ ಆಚರಣೆ

06:02 PM Jun 24, 2020 | Naveen |

ಚಡಚಣ: ವಿಶ್ವ ಯೋಗ ದಿನದ ನಿಮಿತ್ತ ರೇವತಗಾಂವ ಗ್ರಾಮದ ಯುವಕರು ಸರ್ಕಾರಿ ಶಾಲಾ ಆವರಣದಲ್ಲಿ ಕೆಲ ಯೋಗಾಸನ ಮೂಲಕ ವಿಶ್ವ ಯೋಗ ದಿನ ಆಚರಿಸಿದರು.

Advertisement

ರೇವತಗಾಂವ ಗ್ರಾಮದ ಯುವಕ ಮಲ್ಲು ಮಾನೆಯವರು ಯೋಗದ ಆಸನಗಳಾದ ಸೂರ್ಯ ನಮಸ್ಕಾರ, ಪದ್ಮಾಸನ, ವಜ್ರಾಸನ, ಮತ್ಸ್ಯಾಸನ ಹಾಗೂ ಸರ್ವಾಂಗಾಸನಗಳನ್ನು ಮಾಡಿಸಿದರು. ಈ ವೇಳೆಯಲ್ಲಿ ಮಾತನಾಡಿದ ಮಲ್ಲು ಮಾನೆಯವರು. ಸದೃಢ ಭಾರತ ನಿರ್ಮಾಣಕ್ಕೆ ಯುವಕರ ಪಾತ್ರ ಮುಖ್ಯವಾಗಿದೆ. ನಿರಂತರ ಯೋಗಾಭ್ಯಾಸದಿಂದ ಮಾನಸಿಕ, ದೈಹಿಕವಾಗಿ, ಮನಸ್ಸನ್ನು ಏಕಾಗ್ರತೆಗೊಳಿಸುತ್ತದೆ. ಜ್ಞಾನ ವೃದ್ಧಿಗಾಗಿ ಯೋಗ ಅವಶ್ಯಕವಾಗಿದೆ ಎಂದು ಹೇಳಿದರು.

ರಾಜು ಕೋಳಿಯವರು ಮಾತನಾಡಿದರು. ಸಿದ್ದರಾಮ ಪೋದ್ಧಾರ, ಮಾಧೇಶ ಜಾಬಗೊಂಡೆ, ಲಕ್ಷ್ಮಣ ತೇಲಿ, ಅಮಸಿದ್ಧ ದೈವಾಡಿ, ಪಿಂಟು ಜಾಬಗೊಂಡೆ, ಖಯಾಂ ನದಾಫ್‌, ಮೌನೇಶ ಸುತಾರ, ಸಿದ್ಧರಾಮ ಮಾಳಿ, ಲೋಹಿತ ನಾವಿ, ಭೀಮು ವಡ್ರೆ, ಸಾಗರ ಮಾನೆ, ಗುರುರಾಜ ಮಾಳಾಬಗಿ, ಮುಬಾರಕ ಜಮಾದಾರ, ಶ್ರೀಕಂಠ ಅಡಕೆ, ಚನ್ನಪ್ಪ ಜಾಬಗೊಂಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next