Advertisement

ಕತ್ತಲಲ್ಲೇ ದಿನದೂಡುತ್ತಿರುವ ಜನರು

12:04 PM Dec 16, 2019 | Naveen |

„ಶಿವಯ್ಯ ಮಠಪತಿ
ಚಡಚಣ:
ಕರ್ನಾಟಕ-ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಟ್ಟಕಡೆಯ ಶಿರನಾಳ ಗ್ರಾಮದ ಬಡ ಜನರು ಸ್ವಂತ ಜಾಗವಿಲ್ಲದೇ ಸರಕಾರಿ ಗೋಮಾಳಿನ ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ. ಹೊಟ್ಟೆ ಪಾಡಿಗಾಗಿ ದಿನಾಲೂ ಕೂಲಿನಾಲಿ ಮಾಡಿ ಬದುಕುತ್ತಿರುವ ಇಲ್ಲಿರುವ ನೂರಾರು ಬಡ ಕುಟುಂಬಗಳು ಸ್ವಂತ ಮನೆಯಿಲ್ಲದೆ ಪರದಾಡುತ್ತಿದ್ದು, ಸರಕಾರ ಇಂದೋ, ನಾಳೆಯೋ ನಮ್ಮ ಕಡೆ ಕಣ್ಣು ತೆರೆಯಬಹುದೆಂಬ ಆಶಾಭಾವ ಇಟ್ಟುಕೊಂಡಿದ್ದಾರೆ. ಕತ್ತಲಲ್ಲಿ ಮಕ್ಕಳ ವಿದ್ಯಾಭ್ಯಾಸ: ಸರಕಾರಿ ಗೋಮಾಳಿನಲ್ಲಿ ವಾಸಿಸುವ ನೂರಾರು ಕುಟುಂಬಗಳ ಮಕ್ಕಳು ಸರಕಾರ ತಿಂಗಳಿಗೆ ಕೊಡುವ ಸೀಮೆ ಎಣ್ಣೆ ಬೆಳಕಿನಲ್ಲೇ ಓದಬೇಕು. ಸೀಮೆ ಎಣ್ಣೆ ತೀರಿದರೆ ಮುಗಿಯಿತು ಓದು ವುದು ಕಷ್ಟಸಾಧ್ಯ. ಅದು ಅಲ್ಲದೇ ಇಲ್ಲಿಯ ಜನರು ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ಬದುಕುತ್ತಿದ್ದಾರೆ.

Advertisement

ಅಕ್ರಮ-ಸಕ್ರಮ: ಸರಕಾರಿ ಗೋಮಾಳಿನಲ್ಲಿ ವಾಸಿಸುವ ಪ್ರತಿಯೊಬ್ಬರು ಜಾಗ ಮಂಜೂರಿಗಾಗಿ ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿ ಸ್ವಂತ ಜಾಗಕ್ಕಾಗಿ ಕಾಯುತ್ತಿದ್ದಾರೆ. ಸರಕಾರ ಗಮನ ಹರಿಸಿ ಬಡಜನರ ಪಾಲಿಗೆ ಬೆಳಕಾಗಬೇಕಿದೆ.

ಮಳೆ-ಗಾಳಿ ಆತಂಕ: ಇಲ್ಲಿಯ ಜನರು ಹತ್ತು ವರ್ಷಗಳ ಮಳೆಗಾಲ ಕಳೆದಿದ್ದು, ಬೀಳುವ ಮಳೆಗೆ, ಅಬ್ಬರದ ಸಪ್ಪಳಕ್ಕೆ ಕಣ್ರೆಪ್ಪೆ ಮುಚ್ಚದೇ ಅದೆಷ್ಟೋ ರಾತ್ರಿ ಕಳೆದಿದ್ದಾರೆ. ಗಾಳಿ ಮಳೆಗೆ ಪತ್ರಾಸ್‌ಗಳು ಹಾರಿ ಹೋದಾವು ಎಂಬ ದುಗುಡ ಎದೆಯಲ್ಲಿಟ್ಟುಕೊಂಡೇ ಬದುಕು ನಡೆಸುತ್ತಿದ್ದಾರೆ. ಇನ್ನು ಸಣ್ಣ ಕಂದಮ್ಮಗಳ ಭಯ, ಅಳು, ರೋದನೆ ಮುಗಿಲು ಮುಟ್ಟುತ್ತಿದೆ.

ಸರಿಕಾರಿ ಜಾಗದಲ್ಲಿ ವಾಸಿಸುವ ಕುಟುಂಬಗಳಿಗೆ ಇರಲು ಸ್ವಂತ ಜಾಗ ಇಲ್ಲ. ದಿನನಿತ್ಯ ದುಡಿದು ಬದುಕುವ ಮುಗ್ಧ ಜೀವಿಗಳು. ಎಲ್ಲರಲ್ಲೂ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಇರುತ್ತದೆ. ಹತ್ತು ವರ್ಷಗಳಿಂದ ಕತ್ತಲಿನಲ್ಲೇ ವಾಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಇವರತ್ತ ಗಮನ ಹರಿಸಿ ಜಾಗ ಮಂಜೂರು ಮಾಡಬೇಕು.
ಅಶ್ವಿ‌ನಿ ತಳವಾರ (ಶಿರನಾಳ),
ಅಧ್ಯಕ್ಷೆ, ಚಡಚಣ ತಾಲೂಕು ಅಂಗನವಾಡಿ ನೌಕರರ ಸಂಘ.

ಎಲ್ಲರಂತೆ ಅವರಿಗೂ ಸ್ವಂತ ಮನೆಯಲ್ಲಿ ವಾಸಿಸುವ ಬಯಕೆ. ಅನೇಕ ವರ್ಷದಿಂದ ಕುಟುಂಬ ಸಮೇತ ಮಳೆ-ಗಾಳಿಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರಕಾರ ಗಮನ ಹರಿಸಬೇಕು. ಭೀಮರಾವ್‌ ಶಿವಶರಣ,
ಗ್ರಾಮಸ್ಥ.

Advertisement

ಶಿರನಾಳ ಗ್ರಾಮದ ಸರಕಾರಿ ಜಾಗದ ಪತ್ರಾಸ್‌ ಶೆಡ್‌ ವಾಸಿಸುವ ಕುಟುಂಬಗಳಿಂದ ಈಗಾಗಲೇ 140ಕ್ಕೂ ಹೆಚ್ಚು ಅರ್ಜಿ ಅಕ್ರಮ-
ಸಕ್ರಮದಡಿ ಸಲ್ಲಿಕೆಯಾಗಿವೆ. ಸರಕಾರದಿಂದ ಇನ್ನೂ ಯಾವ ಆದೇಶ ಬಂದಿಲ್ಲ.
ವಿಠ್ಠಲ ಕೋಳಿ, ಗ್ರಾಮ
ಲೆಕ್ಕಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next