Advertisement

ಕೋವಿಡ್ ತಡೆಗೆ ಸಹಕರಿಸಿ: ಚವ್ಹಾಣ

01:41 PM May 08, 2020 | Naveen |

ಚಡಚಣ: ನಾಗಠಾಣ ಮತಕ್ಷೇತ್ರದ ಶಾಸಕ ಡಾ| ದೇವಾನಂದ ಚವ್ಹಾಣ ಇತ್ತೀಚೆಗೆ ನಂದರಗಿ, ಬರಡೋಲ, ಇಂಚಗೇರಿ, ದೇವರನಿಂಬರಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ತಡೆಗೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೋವಿಡ್ ತಡೆಗೆ ಶ್ರಮಿಸುತ್ತಿದ್ದಿರಿ. ಮೇಲಾಧಿಕಾರಿಗಳು ಹೇಳಿದ ವಿಚಾರ, ಸಲಹೆಗಳನ್ನು ಪರಿಪಾಲಿಸಬೇಕು. ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಜಾಗೃತಿ ಮೂಡಿಸಬೇಕು. ಬೇರೆ ಊರುಗಳಿಂದ ಯಾರಾದರೂ ಬಂದರೆ ಅವರನ್ನು ಪರೀಕ್ಷಿಸಿ ಅವರ ಮಾಹಿತಿ ಒದಗಿಸಬೇಕು. ವೈದ್ಯರು ಗ್ರಾಮದಲ್ಲೇ ವಾಸ್ತವ್ಯ ಹೂಡಿ ನಿಗಾ ವಹಿಸಬೇಕೆಂದು ಹೇಳಿದರು.

ಇದೇ ವೇಳೆಯಲ್ಲಿ ಶಾಸಕರು ಜಿಗಜೇವಣಿ ಹಾಗೂ ಇಂಚಗೇರಿ ಕೆರೆಗೆ ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿದರು. ಎಪಿಎಂಸಿ ಉಪಾಧ್ಯಕ್ಷ ಬಾಬು ಚವ್ಹಾಣ ಮಾತನಾಡಿ, ಕೊರೊನಾ ತಡೆಗೆ ಸಾರ್ವಜನಿಕರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಹಾಕಿಕೊಂಡು ಸಹಕರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಭಾರತಿ ಚವ್ಹಾಣ, ರವಿದಾಸ ಜಾಧವ, ಪಿಡಿಒ ದಾನಯ್ಯ ಕರಜಗಿಮಠ, ಎಂ.ಟಿ.ಬಿರಾದಾರ, ಭೀಮರಾಯಗೌಡ ಬಿರಾದಾರ, ಅಲ್ಲಿಸಾಬ್‌ ಚಡಚಣ, ಡಾ| ಶಮಶೇರಲಿ ಮುಲ್ಲಾ, ಜೈನುದ್ದೀನ್‌ ಪಠಾಣ, ಮಹಾದೇವ ನಾವಿ, ಜಿಲಾನಿ ವಾಲೀಕಾರ, ಅಂಬರೀಷ ಬೆಳ್ಳೇನವರ ಸೇರಿಗ್ರಾಪಂ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next