Advertisement

ಸಿಎಫ್ಟಿಆರ್‌ಐ ನಿರ್ದೇಶಕರ ವಜಾಕ್ಕೆ ಆಗ್ರಹ

01:05 PM Jun 19, 2017 | Team Udayavani |

ಮೈಸೂರು: ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವ ಸಿಎಫ್ಟಿಆರ್‌ಐ ನಿರ್ದೇಶಕ ಪ್ರೊ. ರಾಮರಾಜಶೇಖರನ್‌ರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸಿಎಫ್ಟಿಆರ್‌ಐ ಉಳಿಸಿ ಹೋರಾಟ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಪ್ರತಿಷ್ಠಿತ ಸಂಸ್ಥೆಯಾಗಿರುವ ಸಿಎಫ್ಟಿಆರ್‌ಐನಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದ್ದು, ಕನ್ನಡಿಗರು ಮತ್ತು ಶೋಷಿತ ವರ್ಗಗಳ ನೌಕರರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪ್ರೊ.ರಾಮರಾಜಶೇಖರನ್‌ ಸಿಎಫ್ಟಿಆರ್‌ಐ ನಿರ್ದೇಶಕರಾಗಿ ನೇಮಕವಾದ ನಂತರ ಕನ್ನಡಿಗರ ಮೇಲೆ ನಿರಂತರ ಶೋಷಣೆ ನಡೆಸಲಾಗುತ್ತಿದ್ದು, ಆ ಮೂಲಕ ಸಿಎಫ್ಟಿಆರ್‌ಐ ಸಂಸ್ಥೆಯನ್ನು ಸಂಪೂರ್ಣ ತಮೀಳಿಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೊ›.ರಾಮರಾಜಶೇಖರನ್‌ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪೊ›.ರಾಮರಾಜಶೇಖರನ್‌ ಸಂಶೋಧನೆ ಹೆಸರಿನಲ್ಲಿ ಸಾರ್ವಜನಿಕ ಹಣ ದುರುಪಯೋಗ ಮಾಡಲಾಗುತ್ತಿದೆ. ಸಿಎಫ್ಟಿಆರ್‌ಐ ನಿಯಮ ಉಲ್ಲಂ ಸಿ ಕನ್ನಡ ನೌಕರರನ್ನು ಅಮಾನತುಗೊಳಿಸಲಾಗಿದೆ. ಆ ಮೂಲಕ ಸಿಎಫ್ಟಿಆರ್‌ಐ ನೌಕರರನ್ನು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದ್ದು, ಸಿಎಫ್ಟಿಆರ್‌ಐನಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ದೇಶಕ ರಾಮರಾಜಶೇಖರನ್‌ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಾಹಿತಿಗಳಾದ ಪ್ರೊ. ಸಿ.ಪಿ.ಕೃಷ್ಣಕುಮಾರ್‌, ಪ್ರೊ. ಕೆ.ಎಸ್‌. ಭಗವಾನ್‌, ಪ್ರೊ.ಮಹೇಶ್‌ ಚಂದ್ರಗುರು, ಪ್ರೊ. ಕೃಷ್ಣಮೂರ್ತಿ ಹನೂರು, ಪ್ರೊ.ಅರವಿಂದ ಮಾಲಗತ್ತಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಿಎಫ್ಟಿಆರ್‌ಐ ಉಳಿಸಿ ಹೋರಾಟ ವೇದಿಕೆಯ ಅಧ್ಯಕ್ಷ ಕೆ.ಎಸ್‌. ಶಿವರಾಮ್‌,  ಸಂಚಾಲ ಕರಾದ ಎಂ. ಚಂದ್ರಶೇಖರ್‌, ಜಾಕೀರ್‌ ಹುಸೇನ್‌, ಮುಖಂಡರಾದ ರವಿಶಂಕರ್‌, ಬೋಗಾದಿ ನಂದೀಶ್‌, ಭಾನು ಮೋಹನ್‌, ಮಹೇಶ್‌ ಸೋಸಲೆ, ಸುರೇಶ್‌ ಬಾಬು, ವೆಂಕಟೇಶ್‌ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next