ಬೆಂಗಳೂರು: ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ(ಸಿಇಟಿ) ಪರೀಕ್ಷೆಯ ದಿನಾಂಕವನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.ಏ.29, 30 ಮತ್ತು ಮೇ 1ರಂದು ನಡೆಸಲಿದೆ.
ಏಪ್ರಿಲ್ 23, 24 ಮತ್ತು 25ರಂದು ಸಿಇಟಿ ನಡೆಸುವುದಾಗಿ ಈ ಹಿಂದೆ ಪ್ರಾಧಿಕಾರ ನಿರ್ಧರಿಸಿತ್ತು. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಮಾ.23ರಂದು ನಡೆಯುವುದರಿಂದ ಈ ಬದಲಾವಣೆ.
ಏ.29ರ ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 30ರ ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯಶಾಸ್ತ್ರ ಹಾಗೂ 30ರ ಬೆಳಗ್ಗೆ ಹೊರನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
2019-20ನೇ ಸಾಲಿಗೆ ಮೊದಲ ವರ್ಷದ ಎಂಜಿನಿಯರಿಂಗ್, ತಂತ್ರಜ್ಞಾನ, ಕೃಷಿ ವಿಜ್ಞಾನ ಕೋರ್ಸ್‌ಗಳಾದ ಬಿವಿಎಸ್‌ಸಿ ಮತ್ತು ಎ.ಎಚ್, ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಬಿ.ಎಸ್ಸಿ (ಹಾನರ್) ಕೃಷಿ, ಅರಣ್ಯ ವಿಜ್ಞಾನ, ರೇಷ್ಮೆ ಕೃಷಿ, ತೋಟಗಾರಿಕೆ, ಜೈವಿಕ ಕೃಷಿ ತಂತ್ರಜ್ಞಾನ, ಸಮುದಾಯ ವಿಜ್ಞಾನ, ಬಿ.ಟೆಕ್ ಕೋರ್ಸ್‌ಗಳಾದ ಕೃಷಿ ಎಂಜಿನಿಯರಿಂಗ್, ಬಯೋಟೆಕ್ನಾಲಜಿ, ಹೈನುಗಾರಿಕೆ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಬಿಎಫ್ಎಸ್‌ಸಿ(ಮೀನುಗಾರಿಕೆ) ಬಿ.ಎಸ್ಸಿ ಕೃಷಿ ಮಾರುಕಟ್ಟೆ ಮತ್ತು ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಹಾಗೂ ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳ ಸೀಟು ಹಂಚಿಕೆಗೆ ಸಿಇಟಿ ರ್‍ಯಾಂಕಿಂಗ್ ಮೂಲಕ ಮಾಡಲಾಗುತ್ತದೆ.