ಮೈಸೂರು : ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಮೈಸೂರಿನ ಹೆಚ್.ಕೆ.ಮೇಘನ್ ಎಲ್ಲಾ ವಿಭಾಗದಲ್ಲೂ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.
ಮೈಸೂರಿನ ಪ್ರಮತಿ ಹಿಲ್‌ವ್ಯೂ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನ್ ಇಂಜಿನಿಯರಿಂಗ್, ಕೃಷಿ, ಬಿಫಾರ್ಮಾ, ನ್ಯಾಚ್ಯುರೋಪತಿ ಹಾಗೂ ಪಶು ವೈದ್ಯಕೀಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ.
ಮೇಘನ್ ತಂದೆ ಕೃಷ್ಣಯ್ಯ ಹೆಚ್.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿದ್ದು, ತಾಯಿ ಲೀಲಾವತಿ.ಎಂ.ಎಸ್ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಇದನ್ನೂ ಓದಿ :ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಹೊಸಕೆರೆ ಗ್ರಾಮದವರಾದ ಇವರು ಪ್ರಸ್ತುತ ಮೈಸೂರಿನ ರಾಮಕೃಷ್ಣ ನಗರದಲ್ಲಿ ವಾಸವಾಗಿದ್ದಾರೆ, ಮೇಘನ್ ಅಣ್ಣ ಲಿಖಿತ್.ಹೆಚ್.ಕೆ, ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.
ಪಿಯುಸಿ ಯಲ್ಲಿ 500 ಕ್ಕೆ 494 ಅಂಕ (ಸಿಬಿಎಸ್ಸಿ) ಪಡೆದಿದ್ದರು. ಮುಂದೆ ಮೆಡಿಸಿನ್ ಮಾಡಬೇಕೆಂಬುದು ಮೇಘನ್ ಆಸೆಯಂತೆ.