Advertisement

ಸಿಇಟಿ: ದ.ಕ., ಉಡುಪಿಯಲ್ಲಿ ಮೊದಲ ದಿನ‌ ಸಾಂಗ

11:07 PM May 20, 2023 | Team Udayavani |

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್‌ ಹಾಗೂ ಬಿಎಸ್ಸಿ ನರ್ಸಿಂಗ್‌ ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಮೊದಲ ದಿನವಾದ ಶನಿವಾರ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ದ.ಕ. ಜಿಲ್ಲೆಯ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು.

Advertisement

ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜೀವಶಾಸ್ತ್ರ ವಿಷಯದಲ್ಲಿ 10,936 ವಿದ್ಯಾರ್ಥಿ ಗಳು ಹಾಗೂ ಗಣಿತ ವಿಷಯದಲ್ಲಿ 13,998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ನೋಂದಾಯಿತ ಒಟ್ಟು 16,206 ವಿದ್ಯಾರ್ಥಿಗಳಲ್ಲಿ ಜೀವಶಾಸ್ತ್ರ ವಿಷಯಕ್ಕೆ 5,270 ವಿದ್ಯಾರ್ಥಿಗಳು ಮತ್ತು ಗಣಿತ ವಿಷಯಕ್ಕೆ 2,208 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಜಿಲ್ಲೆಯ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಜೀವಶಾಸ್ತ್ರ ಪರೀಕ್ಷೆಯು ಬೆಳಗ್ಗೆ 10.30ರಿಂದ 11.50ರ ವರೆಗೆ ಹಾಗೂ ಗಣಿತ ಪರೀಕ್ಷೆಯು ಮಧ್ಯಾಹ್ನ 2.30ರಿಂದ 3.50ರ ವರೆಗೆ ನಡೆಯಿತು.
ಮೇ 21ರಂದು ಬೆಳಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ಬಳಿಕ ರಸಾಯನ ಶಾಸ್ತ್ರ ಪರೀಕ್ಷೆಗಳು ಸಾಗಲಿದೆ. ಮೇ 22ರಂದು ಗಡಿನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿಗಳೊಂದಿಗೆ ಪೋಷಕರು
ಪರೀಕ್ಷಾ ಕೇಂದ್ರದ ಆವರಣಕ್ಕೆ ಕೆಲವೈ ವಿದ್ಯಾರ್ಥಿಗಳೊಂದಿಗೆ ಪೋಷಕರೂ ಆಗಮಿಸಿದ್ದರು. ಪರೀಕ್ಷೆ ಮುಗಿದ ಬಳಿಕ ಮನೆಗೆ ಕರೆದುಕೊಂಡು ಹೋಗಬೇಕೆಂದು ಪೋಷಕರು ಈ ವೇಳೆ ತಿಳಿಸಿದರು. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಕೊನೇ ಕ್ಷಣದ ಓದು
ಸಿಇಟಿ ಪರೀಕ್ಷೆ ಬೆಳಗ್ಗೆ 10.30ರಿಂದ ಆರಂಭ ಎಂದು ತಿಳಿಸಿದ್ದರೂ ಕೆಲವು ವಿದ್ಯಾರ್ಥಿಗಳು 1 ಗಂಟೆ ಮುಂಚಿತವಾಗಿ ಬಂದು ಕಾಲೇಜು ಆವರಣದಲ್ಲಿ ಕೊನೇ ಕ್ಷಣದ ಓದಿನಲ್ಲಿ ನಿರತರಾಗಿರುವುದು ಕಂಡುಬಂತು.

Advertisement

ಉಡುಪಿ: ಜಿಲ್ಲೆಯಾದ್ಯಂತ ಶನಿವಾರ ಆರಂಭಗೊಂಡ ಸಿಇಟಿ ಜೀವಶಾಸ್ತ್ರ ಪರೀಕ್ಷೆಗೆ ನೋಂದಣಿ ಮಾಡಿದ್ದ 5,701 ವಿದ್ಯಾರ್ಥಿಗಳ ಪೈಕಿ 3,273 ಮಂದಿ ಹಾಜರಾಗಿ 2,428 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಗಣಿತ ಪರೀಕ್ಷೆಗೆ 5,702 ನೋಂದಾಯಿತರಲ್ಲಿ 5,332 ಮಂದಿ ಹಾಜರಾಗಿ 370 ಮಂದಿ ಗೈರು ಹಾಜರಾಗಿದ್ದಾರೆ.

ಉಡುಪಿಯ ವಿದ್ಯೋದಯ, ಬೋರ್ಡ್‌ ಪಿಯು ಕಾಲೇಜು, ಸರಕಾರಿ ಬಾಲಕಿಯರ ಪ.ಪೂ. ಕಾಲೇಜು, ಪಿಪಿಸಿ, ಎಂಜಿಎಂ, ಮಣಿಪಾಲ ಪಿಯು ಕಾಲೇಜು, ಕಾರ್ಕಳದ ಭುವನೇಂದ್ರ, ಸರಕಾರಿ ಪಿಯು ಕಾಲೇಜು, ಕುಂದಾಪುರದ ಸರಕಾರಿ ಪಿಯು ಕಾಲೇಜು, ಆರ್‌.ಎನ್‌. ಶೆಟ್ಟಿ, ಹಾಗೂ ಬ್ರಹ್ಮಾವರದ ಸರಕಾರಿ ಪಿಯು ಕಾಲೇಜು, ಎಸ್‌ಎಂಎಸ್‌ ಪಿಯು ಕಾಲೇಜು ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪರಿಶೀಲನೆ
ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next