ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯಪ್ರವೇಶ ಪರೀಕ್ಷೆಗೆ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳುನೋಂದಣಿ ಮಾಡಿಕೊಂಡಿದ್ದಾರೆ.2021ನೇ ಸಾಲಿನ ಸಿಇಟಿಯು ಆ. 28 ಮತ್ತು29ರಂದು ನಡೆಯಲಿದೆ.
ಪ್ರಾಧಿಕಾರ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿತ್ತು. ಜುಲೈ20ಕ್ಕೆಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದರೂ,ಅರ್ಜಿ ತಿದ್ದುಪಡಿಗೆ ಜು.23ರವರೆಗೂ ಅವಕಾಶವಿದೆ.ಮಂಡಳಿಯ ಅಧಿಕಾರಿಗಳು ಹೇಳುವಂತೆ 2 ಲಕ್ಷಕ್ಕೂಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಶುಲ್ಕಪಾವತಿ ಹಾಗೂ ಅರ್ಜಿ ತಿದ್ದುಪಡಿ ಪ್ರಕ್ರಿಯೆನಡೆಯುತ್ತಿರುವುದರಿಂದ ಸ್ಪಷ್ಟ ಅಂಕ ಅಂಶ ಇನ್ನೆರಡುದಿನದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನುತೇರ್ಗಡೆ ಮಾಡಿರುವುದರಿಂದ ವಿಜ್ಞಾನ ವಿಭಾಗದಹೆಚ್ಚಿನ ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ.2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿವಿಜ್ಞಾನ ವಿಭಾಗದಲ್ಲಿ 2,19,777 ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ಅದರಲ್ಲಿ67175 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 122057ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 17111 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 13432 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವೈದ್ಯಕೀಯ ಹಾಗೂ ದಂತವೈದ್ಯಕೀಯಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಬರೆಯಲಿರುವಅಭ್ಯರ್ಥಿಗಳಲ್ಲಿ ಅನೇಕರು ಸಿಇಟಿ ಬರೆಯಲಿದ್ದಾರೆ.ಹೀಗಾಗಿ ಸಿಇಟಿ ಬರೆಯುವವರ ಸಂಖ್ಯೆ ಈ ಬಾರಿಹೆಚ್ಚಾಗಲಿದೆ.
ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟಿನಪ್ರಮಾಣವನ್ನು ಹೆಚ್ಚಿಸಬೇಕಾಗಬಹುದು.2020ರಲ್ಲಿ -1.94ಲಕ್ಷ,2019ರಲ್ಲಿ1.94ಲಕ್ಷ,2018ರಲ್ಲಿ 1.98 ಲಕ್ಷ, 2017ರಲ್ಲಿ 1.85 ಲಕ್ಷ ವಿದ್ಯಾರ್ಥಿಗಳುಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿಪರೀಕ್ಷೆ ಬರೆದಿರುವ ಬಹುತೇಕ ವಿದ್ಯಾರ್ಥಿಗಳು ತಮ್ಮರ್‍ಯಾಂಕ್ ಆಧಾರದಲ್ಲಿ ಸೀಟು ಪಡೆದಿದ್ದಾರೆ.ಎಂಜಿನಿಯರಿಂಗ್ ಸೀಟುಗಳ ಲಭ್ಯತೆ ರಾಜ್ಯದಲ್ಲಿಹೆಚ್ಚಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.ವೈದ್ಯಕೀಯ,ಕೃಷಿವಿಜ್ಞಾನಕೋರ್ಸ್‌ಗಳಲ್ಲಿಸೀಟುಗಳನ್ನುಹೆಚ್ಚಿಸಬೇಕಾದ ಪ್ರಮೆಯ ಬರಹುದು ಎಂದು ಕೆಇಎಅಧಿಕಾರಿಯೊಬ್ಬರು ಮಾಹಿತಿ ನೀಡಿದರು.