ರಾಮನಗರ: ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಆಯ್ಕೆ ಮಾಡುವಕೊಳ್ಳುವ ಸಲುವಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸಿಇಟಿ ದಾಖಲಾತಿ ಪರಿಶೀಲನೆ ಕಾರ್ಯ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. ಇದೇ ಜೂನ್ 19ರವರೆಗೆ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ.
ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಕ್ರಿಯೆಗೆ ಅವಕಾಶವಿದೆ. ಸಿಇಟಿ ಬರೆದ ವಿದ್ಯಾರ್ಥಿಗಳು ವಿವಿಧ ಕೋಸ್‌ಗಳಿಗೆ ಪ್ರವೇಶ ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳು,ಬೆಂಗಳೂರಿಗೆ ಹೋಗಬೇಕಿತ್ತು. ವಿದ್ಯಾರ್ಥಿಗಳು ವಾಸಿಸುವ ಜಿಲ್ಲೆಯಲ್ಲೇ ಈ ಪ್ರಕ್ರಿಯೆ ನಡೆಸುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದರು.
ತಮಗಾಗುತ್ತಿರುವ ಅನಾನುಕೂಲಗಳ ಬಗ್ಗೆಯೂಗಮನ ಸೆಳೆದಿದ್ದರು. ಇದನ್ನು ಮನಗಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಥಮ ಬಾರಿಗೆ ದಾಖಲಾತಿ ಪರಿಶೀಲನೆ ಕಾರ್ಯ ರಾಮನಗರದಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಿದೆ. ಶಾಂತಿ ನಿಕೇತನ ಸಮೂಹ ಸಂಸ್ಥೆಗಳ ಆವರಣದಲ್ಲಿ ಸ್ಥಾಪಿಸಿರುವ ಪರಿಶೀಲನಾ ಕೇಂದ್ರ ಜಿಲ್ಲೆಯಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ಇಲ್ಲಿಯೇ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ಅನ್ವಯಸುತ್ತದೆ. ಬೆಳಗ್ಗೆ 9.15ರಿಂದ ಸಂಜೆ 6.15ರವರೆಗೆ ಕೇಂದ್ರ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಸಿಇಟಿ ಅರ್ಜಿ ಸಲ್ಲಿಸಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ, ತಮ್ಮ ರ್‍ಯಾಂಕ್ ಅನುಗುಣವಾಗಿ ದಿನಾಂಕ ಹಾಗೂ ಸಮಯ ನಿಗದಿಗೊಳಿಸಿ ಸೂಚನಾ ಪತ್ರಗಳನ್ನು ರವಾನಿಸಿದೆ. ನಿಗದಿತ ದಿನದಂದೇ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ಪರಿಶೀಲನೆಗಾಗಿ ಹೋಗಬೇಕಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ದಾಖಲಾತಿ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿ ಹಾಗೂ ಪ್ರವೇಶಾತಿಗೆ ಕೋರಿ ಮೀಸಲಾತಿ ದಾಖಲಾತಿಗಳನ್ನು ನೋಡಲ್ ಅಧಿಕಾರಿಗಳ ಮುಂದೆ ಹಾಜರು ಪಡಿಸಬೇಕಾಗಿದೆ ಎಂದರು. ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಖೋಟಾದಲ್ಲಿ ಮೀಸಲಾತಿಗೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳು ಸಂಬಂಧ ಪಟ್ಟ ಶಾಲಾ ಆಡಳಿತದಿಂದ ಸೂಕ್ತ ದಾಖಲಾತಿಗಳನ್ನು ನೀಡಬೇಕು. ಸಿಇಟಿ ನೋಡಲ್ ಅಧಿಕಾರಿ ರಾಮಕೃಷ್ಣ, ಹೆಚ್ಚುವರಿ ನೋಡಲ್ ಅಧಿಕಾರಿ
ಶಂಕರಪ್ಪ ಹಾಜರಿದ್ದರು.
ವಿದ್ಯಾರ್ಥಿಗಳೇ ಗಮನಿಸಿ:
ಸಾಮಾನ್ಯ ಪ್ರವೇಶ ಪರೀಕ್ಷೆ 2019ಕ್ಕೆ ಆನ್ ಲೈನ್ ಅರ್ಜಿ ನಮೂನೆ ಅಂತಿಮ ಪ್ರತಿ. ಅರ್ಜಿ ಶುಲ್ಕ ಸಂದಾಯದ ಚಲನ್ ಮೂಲ ಪ್ರತಿ. ಸಿಇಟಿ 2019 ಮೂಲ ಪ್ರವೇಶ ಪತ್ರ. ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಅಂಕಪಟ್ಟಿ, ಬಿಇಒ ಅಥವಾ ಡಿಡಿಪಿಐ ಮೇಲುರುಜು ಮಾಡಿರುವ ವ್ಯಾಸಂಗ ಪ್ರಮಾಣ ಪತ್ರ, ಪಾಸ್ ಪೋರ್ಟ್ ಆಳತೆ 2 ಭಾವ ಚಿತ್ರಗಳು, ಇವಿಷ್ಟನ್ನು ಇದೇ ಕ್ರಮದಲ್ಲಿ ಜೋಡಿಸಿ ಒಯ್ಯಬೇಕು. ಈ ದಾಖಲೆಗಳಲ್ಲದೆ ತಲಾ ವಿದ್ಯಾ ರ್ಥಿಗೆ ಅನ್ವಯವಾಗುವ ಪಕ್ಷದಲ್ಲಿ ಹಾಜರು ಪಡಿಸ ಬೇಕಾದ ದಾಖಲಾತಿಗಳನ್ನು (ಉದಾ: ಸಂಖ್ಯಾಧಿಕ ಕೋಟಾದ ಸೀಟುಗಳನ್ನು ಕೋರುವುದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಆದಾಯ ಪ್ರಮಾಣ ಪತ್ರ) ಸಹ ಅಂತಹ ವಿದ್ಯಾರ್ಥಿಗಳು ತಪ್ಪದೇ ಒಯ್ಯಬೇಕಿದೆ ಎಂದು ತಿಳಿಸಲಾಗಿದೆ.