ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಜೂನ್ 6ರಿಂದ ದಾಖಲಾತಿ ಪರಿಶೀಲನೆ ನಡೆಯಲಿದೆ.
ಸಾಮಾನ್ಯ ವರ್ಗ, ಮೀಸಲಾತಿ ಪ್ರವರ್ಗಗಳು, ವಿಶೇಷ ವರ್ಗದ ಎಲ್ಲ ಅಭ್ಯರ್ಥಿಗಳು ತಮ್ಮ ಸ್ವಂತ ಜಿಲ್ಲೆಯಲ್ಲಿ ಅಥವಾ ಪಿಯುಸಿ ವ್ಯಾಸಂಗ ಮಾಡಿದ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬಹುದು. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳು, ಜಮ್ಮು ಮತ್ತು ಕಾಶ್ಮೀರದ ವಲಸಿಗರ ಮಕ್ಕಳು ಗಳಿಸಿರುವ ರ್‍ಯಾಂಕ್‌ಗಳಿಗೆ ಅನುಸಾರವಾಗಿ ಬೆಂಗಳೂರು ಕೇಂದ್ರದಲ್ಲಿಯೇ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್
//kea.kar.nic.in ನಿಂದ ಪಡೆಯಬಹುದಾಗಿದೆ.
ವೇಳಾಪಟ್ಟಿ: ಜೂನ್ 6ರಂದು ಮೊದಲ ರ್‍ಯಾಂಕ್‌ನಿಂದ 2 ಸಾವಿರ ರ್‍ಯಾಂಕ್, ಜೂ.7ರಂದು 2001ರಿಂದ 5000 ರ್‍ಯಾಂಕ್, ಜೂ.10ರಂದು 5001ರಿಂದ 10000 ರ್‍ಯಾಂಕ್, ಜೂ.11ರಂದು 10001ರಿಂದ 20 ಸಾವಿರ ರ್‍ಯಾಂಕ್, ಜೂ.12ರಂದು 20001ರಿಂದ 30 ಸಾವಿರ ರ್‍ಯಾಂಕ್, ಜೂ.13ರಂದು 30001ರಿಂದ 45 ಸಾವಿರ ರ್‍ಯಾಂಕ್, ಜೂ.14ರಂದು 45001ರಿಂದ 65 ಸಾವಿರ ರ್‍ಯಾಂಕ್, ಜೂ.15ರಂದು 65001ರಿಂದ 85 ಸಾವಿರ ರ್‍ಯಾಂಕ್, ಜೂ.17ರಂದು 85001ರಿಂದ 1,05,000 ರ್‍ಯಾಂಕ್, ಜೂ.18ರಂದು 105001ರಿಂದ 1.25 ಸಾವಿರ ರ್‍ಯಾಂಕ್ ಮತ್ತು ಜೂ.19ರಂದು 125001ರಿಂದ ಕೊನೆಯ ರ್‍ಯಾಂಕ್‌ವರೆಗೂ ದಾಖಲಾತಿ ಪರಿಶೀಲನೆ ನಡೆಯಲಿದೆ.
ದಾಖಲಾತಿ ಪರಿಶೀಲನೆ: ಬೆಂಗಳೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಕಲ ಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ತುಮಕೂರು, ಬೀದರ್, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಗದಗ, ಯಾದಗಿರಿ, ಬಾಗಲಕೋಟೆ, ಉಡುಪಿ, ಚಿಕ್ಕಬಳ್ಳಾಪುರ, ಮಡಿಕೇರಿ, ಚಾಮರಾಜನಗರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಸಹಾಯ ಕೇಂದ್ರಗಳಿದ್ದು, ಅಭ್ಯರ್ಥಿಗಳು ಅಲ್ಲಿಯೇ ದಾಖಲಾತಿ ಪರಿಶೀಲನೆ ಮಾಡಿಕೊಳ್ಳಬಹುದು.