Advertisement
ಪ್ರಸ್ತುತ ರಾಜ್ಯದ ವಿವಿಧ ಎಂಜಿನಿಯರಿಂಗ್, ಪ್ಯಾರಾಮೆಡಿಕಲ್ ಕೋರ್ಸ್‌ಗಳ ಮ್ಯಾನೇಜ್‌ಮೆಂಟ್ ಸೀಟ್ ಭರ್ತಿಯಾಗಿದೆ. ಕೆಲವೊಂದು ಕಾಲೇಜುಗಳು ಈಗಾಗಲೇ ತರಗತಿ ಆರಂಭಿಸಿವೆ. ಆದರೆ ಕೌನ್ಸೆಲಿಂಗ್ ಮೂಲಕ ಪ್ರವೇಶ ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪೋಷಕರು ಭವಿಷ್ಯದ ಬಗ್ಗೆ ಹತಾಶರಾಗಿದ್ದಾರೆ. ಹೀಗಾಗಿ ತುರ್ತಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ವಿಶೇಷ ಕ್ರಮ ಕೈಗೊಳ್ಳಬೇಕು ಎಂದರು.
ಯಾಕೆ ಸಾಧ್ಯವಿಲ್ಲ?
ಸುರತ್ಕಲ್ ಟೋಲ್ ಸ್ಥಾಪನೆ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ ಎಂಬ ಬಿಜೆಪಿ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದರು ಹಾಗೂ ಶಾಸಕರು ಪಲಾಯನವಾದ ಮಾಡುತ್ತಿದ್ದಾರೆ. ಟೋಲ್ ತೆಗೆಯು ತ್ತೇವೆ ಎಂದವರು ಯಾರು? ದಿನಾಂಕ ನಿಗದಿ ಮಾಡಿ ಘೋಷಣೆ ಮಾಡಿದ್ದು ಯಾರು? ಅಕ್ರಮ ಟೋಲ್ ಎಂಬ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ್ದುಯಾರು? ಎಂದು ಪ್ರಶ್ನಿಸಿದರು. ಹೋರಾಟಗಾರರ ಹಾಗೂ ಜನಪ್ರತಿ ನಿಧಿಗಳ ಸಭೆ ನಡೆಸಲು ಆಡಳಿತ ಪಕ್ಷದವರಿಗೆ ಯಾಕೆ ಸಾಧ್ಯವಾಗಿಲ್ಲ. ಶೀಘ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದು ಸಭೆ ನಡೆಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದರು.