Advertisement

ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

06:25 AM Jul 24, 2018 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ-2018ನೇ ಸಾಲಿನ ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈ 25ರಿಂದ 28ರ ವರೆಗೆ ಅರ್ಹ ಅಭ್ಯರ್ಥಿಗಳು ಇಚ್ಛೆ ಅಥವಾ ಆಯ್ಕೆಯ ಮಾರ್ಪಾಡು ಮಾಡಲು ಅವಕಾಶವಿದೆ.

Advertisement

ಸೀಟು ಹಂಚಿಕೆ ಫ‌ಲಿತಾಂಶವನ್ನು ಜುಲೈ 30ರಂದು ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in ನೋಡಬಹುದು. ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳಿಗೆ ನಾಲ್ಕು ಆಯ್ಕೆ ನೀಡಲಾಗುತ್ತದೆ.

ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಮೊದಲು ಅದರಿಂದಾಗುವ ಪರಿಣಾಮದ ಬಗ್ಗೆ ಅರಿತುಕೊಳ್ಳುವಂತೆ ಪ್ರಾಧಿಕಾರ ಅಭ್ಯರ್ಥಿಗಳಿಗೆ ನಿರ್ದೇಶಿಸಿದೆ. ಚಾಯ್ಸ 1 ಅಥವಾ ಚಾಯ್ಸ 2 ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು. ಚಾಯ್ಸ 1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಸಂಬಂಧಪಟ್ಟ ಕಾಲೇಜಿನ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಂಡು ಆಗಸ್ಟ್‌ 4ರೊಳಗೆಕಾಲೇಜಿಗೆ ಸೇರಿಕೊಳ್ಳಬೇಕೆಂದು ಪ್ರಾಧಿಕಾರ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next