Advertisement
ದಿನಬಳಕೆ, ಗೃಹಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನ ತತ್ತರಿಸಿದ್ದಾರೆ. ಜೀವನ ದುಸ್ತರ ಎನ್ನುವ ಈ ದಿನಗಳಲ್ಲಿ ಬಡವರು, ಅಸಹಾಯಕರಿಗೆ ಕುಟುಂಬದ ಸದಸ್ಯರ ಅಂತ್ಯಕ್ರಿಯೆ, ಅಪರಕ್ರಿಯೆ ಕೂಡ ದೊಡ್ಡ ಸವಾಲೇ ಸರಿ. ಅದಕ್ಕೂ ಪರರ ಮುಂದೆ ಕೈಚಾಚುವ ಅಸಹಾಯಕ ಜನ ಈಗಲೂ ರಾಜ್ಯದಲ್ಲಿ ಕಂಡುಬರುತ್ತಾರೆ. ಅಂಥವರಿಗೆ ಈ ಹಿಂದಿನ ಸರಕಾರ ನೀಡುತ್ತಿದ್ದ 5 ಸಾವಿರ ಮೊತ್ತ ಕಷ್ಟಕಾಲದಲ್ಲಿ ನೆರವಾಗುತ್ತಿತ್ತು.
Related Articles
ಅಂತ್ಯಸಂಸ್ಕಾರ ನೆರವು ಪಡೆಯಬೇಕಿದ್ದರೆ ಸ್ಥಳೀಯ ಕಂದಾಯ ಕಚೇರಿಯ ಅಧಿಕಾರಿಗಳಿಂದ ಬರೆಸಿಕೊಂಡು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ತಹಶೀಲ್ದಾರರಿಂದ ಮಂಜೂರುಗೊಂಡು ಫಲಾನುಭವಿ ಖಾತೆಗೆ ಹಣ ಸಂದಾಯವಾಗುತ್ತಿತ್ತು. ಪ್ರಸ್ತುತ ಆ ಯೋಜನೆ ಇಲ್ಲವಾದರೂ ನೆರವು ಕೋರಿ ಅರ್ಜಿ ಹಿಡಿದು ಕಚೇರಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದೊಂದು ವರ್ಷದಿಂದ ಅರ್ಜಿ ಸ್ವೀಕರಿಸುವುದನ್ನೇ ಕೆಲವೆಡೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವೆಡೆ ಅರ್ಜಿ ಸ್ವೀಕರಿಸಿ “ಸರಕಾರದಿಂದ ಹಣ ಬಂದರೂ ಬರಬಹುದು’ ಎಂದು ಭರವಸೆ ನೀಡಿ ಅರ್ಜಿದಾರರನ್ನು ಸಾಗಹಾಕುತ್ತಿದ್ದಾರೆ.
Advertisement
ನಿರ್ಗತಿಕರಿಗೆ ಕಷ್ಟ ಮತ್ತು ನೋವಿನ ಕಾಲದಲ್ಲಿ ಈ ಹಣ ಅತ್ಯಂತ ಬೆಲೆಬಾಳುತ್ತದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯೋಜನೆ ಆರಂಭಗೊಂಡಿದ್ದು ಈಗ ಮತ್ತೆ ಅದೇ ಪಕ್ಷದ ಸರಕಾರ ಇರುವುದರಿಂದ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಮರುಜೀವ ನೀಡುವರೆಂಬ ವಿಶ್ವಾಸವಿದೆ. ಈ ಕುರಿತು ಸಂಘಟನೆ ವತಿಯಿಂದಲೂ ಸರಕಾರವನ್ನು ಆಗ್ರಹಿಸಲಿದ್ದೇವೆ.– ಅಣ್ಣಪ್ಪ ನಕ್ರೆ , ದಲಿತ ಮುಖಂಡ ಕಂದಾಯ ಇಲಾಖೆಯ ಪಿಂಚಣಿ ಅಥವಾ ಇನ್ಯಾವ ಇಲಾಖೆಯಡಿ ಸಹಾಯಧನ ಈ ಹಿಂದೆ ನೀಡಲಾಗುತ್ತಿತ್ತು ಮತ್ತು ಸ್ಥಗಿತಕ್ಕೆ ಕಾರಣವೇನು ಎಬುದನ್ನು ಪರಿಶೀಲಿಸುವೆ. ತಾಂತ್ರಿಕ ಕಾರಣಗಳನ್ನು ಕಂಡುಕೊಂಡು ಸರಕಾರದ ಗಮನಕ್ಕೆ ತಂದು ಮರುಜಾರಿಗೆ ಪ್ರಯತ್ನಿಸಲಾಗುವುದು.
– ಡಾ| ರಶ್ಮಿ ವಿ. ಮಹೇಶ್,
ಕಾರ್ಯದರ್ಶಿ (ವಿಪತ್ತು ನಿರ್ವಹಣೆ ನೋಂದಣಿ ಮತ್ತು ಮುದ್ರಾಂಕ), ಕಂದಾಯ ಇಲಾಖೆ, ಪ್ರಧಾನ ಕಚೇರಿ ಬೆಂಗಳೂರು -ಬಾಲಕೃಷ್ಣ ಭೀಮಗುಳಿ