Advertisement

ಸಂಗೀತ ವಿವಿಯಿಂದ ಸರ್ಟಿಫಿಕೇಟ್‌ ಕೋರ್ಸ್‌

01:21 AM Feb 15, 2019 | Team Udayavani |

ಮೈಸೂರು : ಮೈಸೂರಿನಲ್ಲಿರುವ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕಾರ್ಯ ಚಟುವಟಿಕೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಬೆಂಗಳೂರು, ದಕ್ಷಿಣ ಕನ್ನಡ(ಮಂಗಳೂರು), ಧಾರವಾಡ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ, ವಿವಿಧ ವಿಷಯಗಳಲ್ಲಿ 6 ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಿವಿ ಪ್ರಭಾರ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮೈಸೂರು, ಮಂಡ್ಯ ನಗರಗಳಲ್ಲಿ ನಡೆಯುತ್ತಿರುವ ಭಕ್ತಿ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ಹಾರ್ಮೋನಿಯಂ, ತಬಲ, ಯಕ್ಷಗಾನ, ಗಮಕ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಸೇರಿದಂತೆ ವಿವಿಧ ವಿಷಯಗಳ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ರಾಜ್ಯವ್ಯಾಪಿ ಆರಂಭಿಸಲು ವಿಶ್ವವಿದ್ಯಾಲಯದ ಪ್ರಶಾಸನ ಸಭೆ ಅನುಮೋದನೆ ಪಡೆಯಲಾಗಿದ್ದು, ಆರು ತಿಂಗಳ ಈ ಕೋಸ್‌ìಗಳಿಗೆ ವಾರದಲ್ಲಿ ಮೂರು ದಿನ ತರಗತಿಗಳು ನಡೆಯಲಿವೆ ಎಂದರು.

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್‌ ಮಾಡಲು ಅರ್ಹರು. ಒಬ್ಬರು ಎರಡು ವಿಷಯದಲ್ಲಿ ಪ್ರವೇಶಾತಿ ಪಡೆಯಬಹು ದಾಗಿದೆ. ಫೆ. 18ರಿಂದ ಅರ್ಜಿ ಪಡೆದು ಮಾ. 20 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಕೆಲ ತೊಡಕುಗಳಿಂದ ಡಿ.ಲಿಟ್‌ ಪದವಿಯನ್ನು ನಿಲ್ಲಿಸಲಾಗಿತ್ತು. ಈಗ ಪುನಾರಂಭಿಸಲು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲರ ಒಪ್ಪಿಗೆ ದೊರೆತಿದೆ ಎಂದರು. ಮಾಹಿತಿಗೆ ದೂ.0821-2419443, 2402141,ವೆಬ್‌ಸೈಟ್‌: www.musicuniversity ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next