Advertisement
ನಿರ್ಮಾಣ: ಈಗಿರುವ ಆಶ್ರಮದ ಕಟ್ಟಡ ನಿರ್ಮಾಣ ಪ್ರಾರಂಭವಾಗಿದ್ದು 1906ರಲ್ಲಿ.
Related Articles
Advertisement
ಮರು ನಾಮಕರಣ: ಆರಂಭದಲ್ಲಿ ಈ ಕೇಂದ್ರವನ್ನು “ರಾಮಕೃಷ್ಣ ಮಿಷನ್ ಸಂಸ್ಥೆ’ ಎಂದು ಕರೆಯಲಾಗುತ್ತಿತ್ತು. ಸ್ವಾಮಿ ಬ್ರಹ್ಮಾನಂದರ ಸಲಹೆಯಂತೆ 1910ರಲ್ಲಿ “ರಾಮಕೃಷ್ಣ ಆಶ್ರಮ’ ಎಂದು ಹೆಸರು ಬದಲಾಯಿಸಲಾಯ್ತು. ಏಪ್ರಿಲ್ 1 1999ರಲ್ಲಿ, ಆಶ್ರಮವನ್ನು “ರಾಮಕೃಷ್ಣ ಮಠ’ ಎಂದು ಮರುನಾಮಕರಣ ಮಾಡಲಾಯ್ತು.
ಪ್ರಾರ್ಥನಾ ಮಂದಿರ: ಆಶ್ರಮದ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, 1959ರಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಯ್ತು. ಅದೇ ರೀತಿ, ಶಾರದಾ ಮಾತಾಜಿಯವರ ಸ್ಮಾರಕ ಭವನ, ರಾಮಕೃಷ್ಣ ಪರಮಹಂಸರ ಸ್ಮಾರಕ ಭವನ, ವಿವೇಕಾನಂದರ ಸ್ಮಾರಕ ಭವನ, 1600 ಮಂದಿ ಕೂರಬಹುದಾದ ರಾಮಕೃಷ್ಣ ಬಯಲು ಸಭಾಂಗಣ, ಆಶ್ರಮದ ಆವರಣದಲ್ಲಿದೆ.
ಮಾತೆ ತಂಗಿದ್ದ ಜಾಗ: 1911ರಲ್ಲಿ ಬೆಂಗಳೂರಿಗೆ ಬಂದ ಶಾರದಾ ಮಾತೆಯವರು ಇಲ್ಲಿ ತಂಗಿದ್ದ ನೆನಪಿಗಾಗಿ, ಅವರು ಧ್ಯಾನಕ್ಕೆ ಕುಳಿತಿದ್ದ ಸ್ಥಳದ ಮೇಲೆ ಕಲ್ಲಿನ ಮಂಟಪ ನಿರ್ಮಿಸಲಾಗಿದೆ. ವಿವೇಕಾನಂದರು ಬೆಂಗಳೂರಿಗೆ ಬಂದಾಗ, ವಿರಮಿಸಿದ ಕಲ್ಲಿನ ಬೆಂಚನ್ನೂ ಇಲ್ಲಿಯೇ ಇಡಲಾಗಿದೆ…
ಎಲ್ಲಿದೆ?: ಬುಲ್ ಟೆಂಪಲ್ ರಸ್ತೆ, ಬಸವನಗುಡಿ
(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ವಾರಕ್ಕೆ ಒಂದೊಂದರಂತೆ, ಕಟ್ಟಡಗಳ ತುಣುಕು ಮಾಹಿತಿಯ ಸರಮಾಲೆ ಈ ಅಂಕಣದಲ್ಲಿ ಮೂಡಿ ಬರಲಿದೆ )