Advertisement

ಸೆಂಚ್ಯುರಿಗೆ ಇನ್ನೊಂದೇ ಬಾಕಿ

09:00 PM May 09, 2018 | |

ಐಟಂ ಡ್ಯಾನ್ಸ್‌ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಆಲಿಷಾ ಸದ್ದಿಲ್ಲದೆ ಒಂದು ಹೊಸ ದಾಖಲೆಯನ್ನು ಮಾಡಿದ್ದಾರೆ. ಅದೇನೆಂದರೆ, ಅವರು ಇದುವರೆಗೂ 99 ಚಿತ್ರಗಳನ್ನು ಮುಗಿಸಿದ್ದು, ಸದ್ಯದಲ್ಲೇ ಸೆಂಚ್ಯುರಿ ಬಾರಿಸಿದ್ದಾರೆ. ಐಟಂ ಡ್ಯಾನ್ಸ್‌ ಮಾಡಿಯೇ ಒಂದು ಶತಕ ಪೂರೈಸುತ್ತಿರುವ ನಟಿ ಕನ್ನಡ ಚಿತ್ರರಂಗದಲ್ಲಿ ಇನ್ನೊಬ್ಬರು ಸಿಗುವುದು ಕಷ್ಟ ಎಂದರೆ ತಪ್ಪಿಲ್ಲ.

Advertisement

ಸಾಮಾನ್ಯವಾಗಿ ಐಟಂ ಸಾಂಗ್‌ಗೆ ಮುಂಬೈನಿಂದ ಅಥವಾ ಬೇರೆ ಭಾಷೆಗಳಿಂದ ಡ್ಯಾನ್ಸರ್‌ಗಳನ್ನು ಕರೆಸಲಾಗುತ್ತದೆ. ಆದರೆ, ಆಲಿಶಾ ಪಕ್ಕಾ ಕನ್ನಡದ ಹುಡುಗಿ. ಮಂಗಳೂರು ಮೂಲದ ಆಲಿಷಾ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ …. ಹೀಗೆ ಬೇರೆ ಬೇರೆ ಭಾಷೆಗಳಲ್ಲೂ ಅಲಿಶಾ ಕುಣಿದಿದ್ದಾರೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ “ಶಿವು-ಪಾರು’ ಎಂಬ ಚಿತ್ರ ಅವರ 99ನೇ ಚಿತ್ರವಂತೆ.

99 ಚಿತ್ರಗಳಲ್ಲಿ ನೃತ್ಯ ಮಾಡಿದವರಿಗೆ ಇನ್ನೊಂದು ಚಿತ್ರ ಮಾಡುವುದು ಕಷ್ಟವಾ? ಇಷ್ಟರಲ್ಲಾಗಲೇ ಆಲಿಷಾ ತಮ್ಮ ನೂರನೆಯ ಚಿತ್ರದಲ್ಲಿ ಐಟಂ ಡ್ಯಾನ್ಸ್‌ ಮಾಡಿದ್ದರೂ ಆಶ್ಚರ್ಯವೇನಿಲ್ಲ. ಆಲಿಶಾ ತಾನು ಸಿನಿಮಾ ನಟಿಯಾಗಬೇಕು, ಡ್ಯಾನ್ಸರ್‌ ಆಗಬೇಕು ಎಂದುಕೊಂಡು ಬೆಂಗಳೂರಿಗೆ ಬರಲಿಲ್ಲವಂತೆ. ಮಂಗಳೂರಿನಲ್ಲಿ ಕಾಲೇಜು ಮುಗಿಸಿಕೊಂಡು ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಆಲಿಶಾಗೆ ಸಿಕ್ಕಿದ್ದು ಸಿನಿಮಾ ಆಫ‌ರ್‌.

ಸ್ನೇಹಿತೆಯೊಬ್ಬಳ ಮೂಲಕ “ಮಾಯಾವಿ’ ಎಂಬ ಚಿತ್ರದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡ ಆಲಿಷಾ, ನಂತರದ ವರ್ಷಗಳಲ್ಲಿ “ಚಕ್ರವರ್ತಿ’, “ಹಾಲುತುಪ್ಪ’, “ಮದುವೆ ದಿಬ್ಬಣ’, “ಗಜಕೇಸರಿ’, “ಚಿನ್ನದ ಗೊಂಬೆ’, “ಶಿವು-ಪಾರು’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಐಟಂ ಡ್ಯಾನ್ಸ್‌ ಮಾಡಿ ಆಲಿಷಾಗೆ ಬೇಸರ ಬಂದಿಲ್ಲವಾ ಎಂಬ ಪ್ರಶ್ನೆ ಬರಬಹುದು. “ನನಗೆ ಡ್ಯಾನ್ಸ್‌ ಎಂದರೆ ಬಹಳ ಇಷ್ಟ.

ಖುಷಿಯಿಂದಲೇ ಪ್ರತಿ ಸಿನಿಮಾಗಳನ್ನು ಒಪ್ಪಿಕೊಂಡು, ಮಾಡುತ್ತೇನೆ. ಇಲ್ಲಿವರೆಗೆ ಮಾಡಿದ ಯಾವ ಸಿನಿಮಾಗಳ ಬಗ್ಗೆಯೂ ನನಗೆ ಬೇಸರವಿಲ್ಲ’ ಎಂಬ ಉತ್ತರ ಬರುತ್ತದೆ. ಮುಂದಿನ ದಿನಗಳಲ್ಲೂ ಆಲಿಶಾ, ಐಟಂ ಡ್ಯಾನ್ಸ್‌ ಮಾಡುವ ಮೂಲಕವೇ ಮುಂದುವರೆಯುವುದಕ್ಕೆ ಯೋಚಿಸುತ್ತಿದ್ದಾರೆ. “ಒಂದು ಮಗು ಪ್ರತಿದಿನ ಹೇಗೆ ಹೊಸತನ್ನು ಕಲಿಯುತ್ತಾ ಮುಂದೆ ಸಾಗುತ್ತದೋ, ಅದೇ ರೀತಿ ನಾನು ಕೂಡಾ ಪ್ರತಿ ಸಿನಿಮಾ,

Advertisement

ಹಾಡಿನಲ್ಲೂ ಹೊಸ ಅಂಶವನ್ನು ಕಲಿಯುತ್ತೇನೆ. ನಾನೇನಾದರೂ ಬೇಸರಪಟ್ಟುಕೊಂಡಿದ್ದರೆ, ಇವತ್ತು ಅಲಿಶಾ ಎಂಬ ಹೆಸರು ಕೇಳಿಬರುತ್ತಿರಲಿಲ್ಲ. ನಾನು ಹಾಡಿನ ಮೂಲಕವೇ ಗುರುತಿಸಿಕೊಂಡವಳು. ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ’ ಎನ್ನುತ್ತಾರೆ ಆಲಿಷಾ. ಅಲಿಶಾ ಚಿತ್ರರಂಗಕ್ಕೆ ಬಂದು ಆರು ವರ್ಷಗಳಾಗಿವೆ.

ಅಂದಿನಿಂದ ಇಂದಿನವರೆಗೂ ಬಿಝಿಯಾಗಿರುವ ಅವರು, ತಿಂಗಳಲ್ಲಿ 25 ದಿನ ಕೆಲಸ ಮಾಡಿದ ಉದಾಹರಣೆಯೂ ಇದೆಯಂತೆ. “ಚಿತ್ರರಂಗದವರ ಸಹಕಾರವಿಲ್ಲದೇ ನಾವು ಬೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಚಿತ್ರರಂಗದ ಪ್ರತಿಯೊಬ್ಬರನ್ನು ನಾನು ನೆನಪಿಸಿಕೊಳ್ಳಲೇ ಬೇಕು. ನಟ-ನಟಿಯರು, ತಂತ್ರಜ್ಞರು ಸೇರಿದಂತೆ ಪ್ರತಿಯೊಬ್ಬರ ಪ್ರೋತ್ಸಾಹದಿಂದ ಇವತ್ತು ಚಿತ್ರರಂಗದಲ್ಲಿ ಬಿಝಿಯಾಗಿದ್ದೇನೆ’ ಎನ್ನುತ್ತಾರೆ ಆಲಿಶಾ.

Advertisement

Udayavani is now on Telegram. Click here to join our channel and stay updated with the latest news.

Next