ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಮತ್ತೂಂದು ಬಲಿ ಪಡೆಯುವುದರ ಜತೆಗೆ ಈಗ ಸೋಂಕಿತರ ಸಂಖ್ಯೆ ಶತಕ ದಾಟಿ ಸಾಗಿದ್ದು, ಶನಿವಾರ ಒಂದೇ ದಿನ 20 ಕೊರೋನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದ ಸೋಂಕಿತ 70 ವರ್ಷದ ವೃದ್ಧ(ಪಿ-6258) ಜೂ.12 ರಂದೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿ, ನೇರವಾಗಿ ಕಿಮ್ಸ್‌ಗೆ ಜೂ.9ರಂದು ತೆರಳಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರಕಾರದ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ.
ಶುಕ್ರವಾರವಷ್ಟೇ 19 ಜನರಲ್ಲಿ ಸೋಂಕು ದೃಢಪಟ್ಟ ಬೆನ್ನಲ್ಲಿಯೇ ಈ ಹಿಂದಿನ ಸೋಂಕಿತರ ಸಂಪರ್ಕದಿಂದಲೇ ಶನಿವಾರ ಬರೋಬ್ಬರಿ 20 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 2 ವರ್ಷ ಬಾಲಕ, 4 ವರ್ಷ ಬಾಲಕ, 5 ವರ್ಷ ಬಾಲಕಿ, 10 ವರ್ಷ ಬಾಲಕಿ, 11 ವರ್ಷ ಬಾಲಕ ಸೇರಿದಂತೆ 5 ಜನ ಮಕ್ಕಳಿಗೆ ಸೋಂಕು ತಗುಲಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದ 59 ವರ್ಷದ ಸೋಂಕಿತನ ಸಂಪರ್ಕದಿಂದ ಇಬ್ಬರಿಗೆ, ಕಲಘಟಗಿಯ ದೇವಿಕೊಪ್ಪ ಗ್ರಾಮದ 68 ವರ್ಷದ ಸೋಂಕಿತನ ಸಂಪರ್ಕದಿಂದ ಐದು ಜನರಿಗೆ, ಉಣಕಲ್ ನಿವಾಸಿಯಾದ 71 ವರ್ಷ ಮಹಿಳೆಯ ಸೋಂಕಿನಿಂದ 7 ಜನರಲ್ಲಿ, ಅಣ್ಣಿಗೇರಿಯ ಸೋಂಕಿತನಿಂದ ಸಂಪರ್ಕದಿಂದ ಮೂವರು ಜನರಲ್ಲಿ ಸೋಂಕು ಹರಡಿದೆ.
20 ಸೋಂಕಿತರ ವಿವರ: ಹುಬ್ಬಳ್ಳಿ ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲನಿಯ ಸನಾ ಕಾಲೇಜು ಹಿಂಭಾಗದ ನಿವಾಸಿಯಾದ 29 ವರ್ಷದ ಸೋಂಕಿತ ಮಹಿಳೆಯ (ಪಿ-5969) ಸಂಪರ್ಕದಿಂದ 4 ವರ್ಷದ(ಪಿ-6520) ಬಾಲಕನೂ ಸೋಂಕು ತಾಗಿದೆ. ಉಣಕಲ್‌ನ 71ವರ್ಷದ ಸೋಂಕಿತ ವೃದ್ಧೆಯ (ಪಿ-6257)ಸಂಪರ್ಕದಿಂದ 2 ವರ್ಷ ಮಗು(ಪಿ-6533),5 ವರ್ಷದ ಬಾಲಕಿ (ಪಿ-6534),31ವರ್ಷದ ಮಹಿಳೆ(ಪಿ-6535),20 ವರ್ಷದ ಯುವಕ (ಪಿ-6536), 19ವರ್ಷದ ಯುವಕ (ಪಿ-6537), 44 ವರ್ಷದ ಮಹಿಳೆ (ಪಿ-6538), 46 ವರ್ಷದ ಪುರುಷ (ಪಿ-6539) ಜನರಲ್ಲಿ ಸೋಂಕು ದೃಢಪಟ್ಟಿದೆ.
ಜೂ.9ರಂದು ಸೋಂಕು ದೃಢಪಟ್ಟಿದ್ದ ಕಲಘಟಗಿಯ ದೇವಿಕೊಪ್ಪ ಗ್ರಾಮದ 68 ವರ್ಷದ (ಪಿ-5828) ವೃದ್ದರೊಬ್ಬರ ಸಂಪರ್ಕದಿಂದ 34 ವರ್ಷದ ಪುರುಷ (ಪಿ-6527), 33 ವರ್ಷದ ಪುರುಷ (ಪಿ-6528), 11 ವರ್ಷದ ಬಾಲಕ (ಪಿ-6529), 31 ವರ್ಷದ ಮಹಿಳೆ (ಪಿ-6530), 58 ವರ್ಷದ ಮಹಿಳೆಗೂ (ಪಿ-6531) ಸೋಂಕು ಬಂದಿದೆ.
ನವದೆಹಲಿಯಿಂದ ಹಿಂದಿರುಗಿದ ಅಣ್ಣಿಗೇರಿಯ ಸೋಂಕಿತ ನಿವಾಸಿಯಾದ 40 ವರ್ಷದ (ಪಿ-5972) ಸಂಪರ್ಕದಿಂದ 10 ವರ್ಷ ಬಾಲಕಿ (ಪಿ-6524), 28 ವರ್ಷದ ಮಹಿಳೆ (ಪಿ-6525), 23 ವರ್ಷದ ಯುವಕ (ಪಿ-6526) ಸೋಂಕು ತಗುಲಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದ 59 ವರ್ಷ (ಪಿ-6222) ಸಂಪರ್ಕದಿಂದ 48 ವರ್ಷದ ಮಹಿಳೆ (ಪಿ-6521), 27 ವರ್ಷದ (ಪಿ-6523) ಪುರುಷನಿಗೂ ಸೋಂಕು ಬಂದಿದೆ. ಇನ್ನೂ ದೆಹಲಿಯಿಂದ ಹಿಂದಿರುಗಿರುವ 29 ವರ್ಷದ (ಪಿ-6522) ಮಹಿಳೆ ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿರುವ 27 ವರ್ಷದ ಯುವಕನಲ್ಲಿ (ಪಿ-6532) ಸೋಂಕು ಧೃಡಪಟ್ಟಿದೆ.