Advertisement
ರಾಜ್ಯದಲ್ಲಿ ಮೊದಲ ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟಿದ್ದು ಮಾ. 8ರಂದು. ಅಲ್ಲಿಂದ ಮಾ. 31ರ ವರೆಗೆ 101 ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಆದರೆ, ಎಪ್ರಿಲ್‌ನಲ್ಲಿ ದುಪ್ಪಟ್ಟು ಏರಿಕೆ ಕಂಡಿದ್ದು, ಕಳೆದ 10 ದಿನಗಳಲ್ಲಿ 106 ಮಂದಿಗೆ ಸೋಂಕು ತಗಲಿದೆ. ಈ ಪೈಕಿ ಶೇ. 90ರಷ್ಟು ಮಂದಿ ಸೋಂಕಿತರ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಒಟ್ಟಾರೆ ಸೋಂಕಿತರಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ. 34 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 171 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳಲ್ಲಿ ಸೋಂಕು ಹೆಚ್ಚಳವಾಗಿದ್ದು, ಗುರುವಾರ 3, ಶುಕ್ರವಾರ ಇಬ್ಬರು ಮಕ್ಕಳಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ ಈವರೆಗೆ 10 ಮಕ್ಕಳು ಸೋಂಕಿತರಾಗಿದ್ದಾರೆ. ದ.ಕ.ದಲ್ಲಿ 10 ತಿಂಗಳ ಮಗು, ಬೆಂಗಳೂರು, ಬಾಗಲಕೋಟೆಯಲ್ಲಿ ತಲಾ 3, ತುಮಕೂರು, ಬಳ್ಳಾರಿ, ಮೈಸೂರಿನಲ್ಲಿ ತಲಾ ಒಂದು ಮಗುವಿಗೆ ಸೋಂಕು ದೃಢಪಟ್ಟಿದೆ.
– ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವವರು -23,089. ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು -2,310, ದ್ವಿತೀಯ ಸಂಪರ್ಕಿತರು – 6,510
– ಆಸ್ಪತ್ರೆಗೆ ಶುಕ್ರವಾರ ದಾಖಲಾದ ಶಂಕಿತರು -132, ಬಿಡುಗಡೆಯಾದವರು – 61, ಈವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಂಕಿತರು – 492.
-ಶುಕ್ರವಾರ ನೆಗೆಟಿವ್ ಬಂದ ವರದಿ – 497, ಪಾಸಿಟಿವ್ ಬಂದ ವರದಿ- 10 ( ಈವರೆಗೆ ಒಟ್ಟಾರೆ ನೆಗೆಟಿವ್ – 7,673, ಪಾಸಿಟಿವ್ – 207)
-ಶಂಕಿತರ ಪೈಕಿ ಶುಕ್ರವಾರ ಸೋಂಕು ಪರೀಕ್ಷೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ – 574
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು – 171, ಗುಣಮುಖರಾಗಿ ಮನೆಗೆ ತೆರಳಿದವರು – 30.
Related Articles
– ಬಿ. ಶ್ರೀರಾಮುಲು,
ಆರೋಗ್ಯ ಸಚಿವ
Advertisement