ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ ಹರಿಣಗಳ ವೇಗಿಗಳು ಟೀಂ ಇಂಡಿಯಾದ ಮೇಲೆ ಸವಾರಿ ಮಾಡಿದ್ದಾರೆ. ಲುಂಗಿ ಎನ್ ಗಿಡಿ ಮತ್ತು ಕಗಿಸೋ ರಬಾಡಾ ದಾಳಿಗೆ ನಲುಗಿದ ಟೀಂ ಇಂಡಿಯಾ ಕೇವಲ ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಎರಡನೇ ದಿನದಾಟ ಮಳೆಗೆ ಬಲಿಯಾಗಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ರಾಹುಲ್ ಹಿಂದಿನ ಮೊತ್ತಕ್ಕೆ 1 ಸೇರಿಸಿ 123 ರನ್ ಗೆ ಔಟಾದರು. ಅಜಿಂಕ್ಯ ರಹಾನೆ ಅವರು 48 ರನ್ ಗೆ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಇದನ್ನೂ ಓದಿ:ಇಂಗ್ಲೆಂಡ್ ಗೆ ಬೊಲ್ಯಾಂಡ್ ಬಾಕ್ಸಿಂಗ್ ಪಂಚ್: ಆ್ಯಶಸ್ ಸರಣಿ ಗೆದ್ದ ಆಸ್ಟ್ರೇಲಿಯಾ
ಉಳಿದ ಆಟಗಾರರು ಯಾರೂ ಹರಿಣಗಳ ವೇಗದ ದಾಳಿಯನ್ನು ಎದುರಿಸುವ ಧೈರ್ಯ ತೋರಲಿಲ್ಲ. ಬುಮ್ರಾ 14 ರನ್, ಪಂತ್ ಮತ್ತು ಶಮಿ ತಲಾ 8 ರನ್, ಅಶ್ವಿನ್, ಸಿರಾಜ್ ಮತ್ತು ಶಾರ್ದೂಲ್ ತಲಾ 4 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್ ಗಿಡಿ ಆರು ವಿಕೆಟ್ ಮತ್ತು ಕಗಿಸೋ ರಬಾಡಾ ಮೂರು ವಿಕೆಟ್ ಪಡೆದು ಮಿಂಚಿದರು. ಒಂದು ವಿಕೆಟ್ ಮಾಕ್ರೋ ಜೆನ್ಸನ್ ಪಾಲಾಯಿತು.