ಹೊಸದಿಲ್ಲಿ: ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಕಟ್ ಆಫ್ ಅಂಕಗಳ ಪ್ರಮಾಣವನ್ನು ಶೇ.25 ಕಡಿಮೆಗೊಳಿಸುವುದರ ಬಗ್ಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ. ಈ ನಿಯಮ ಎಲ್ಲ ವರ್ಗಗಳಿಗೂ ಅನ್ವಯವಾಗಲಿದೆ.
2022-23ನೇ ಸಾಲಿನ ವೈದ್ಯ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಈ ನಿಯಮ ಅನ್ವಯವಾಗಲಿದೆ.
ಕಳೆದ ವರ್ಷ ದೇಶಾ ದ್ಯಂತ 1,400ಕ್ಕೂ ಅಧಿಕ ಮೆಡಿಕಲ್ ಪಿ.ಜಿ. ಸೀಟುಗಳು ಭರ್ತಿ ಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯ ಆಯೋಗ ಸೋಮವಾರ ನಿರ್ಧಾರ ಪ್ರಕಟಿಸಿದೆ.
ಜನರಲ್ ಮೆರಿಟ್‌ಗೆ ಶೇ.25, ದಿವ್ಯಾಂಗರು (ಜನರಲ್ ಮೆರಿಟ್) ಶೇ.20, ಎಸ್‌ಸಿ, ಎಸ್‌ಟಿ, ಒಬಿಸಿಗೆ ಮತ್ತು ದಿವ್ಯಾಂಗರು (ಎಸ್‌ಸಿ, ಎಸ್‌ಟಿ, ಒಬಿಸಿ) ಶೇ.15 ಕಟ್ ಆಫ್ ಅಂಕಗಳನ್ನು ಇಳಿಸಲಾಗಿದೆ.