Advertisement

3 ದಿನಗಳಲ್ಲಿ ರಾಜ್ಯಗಳಿಗೆ,ಕೇಂದ್ರಾಡಳಿತ ಪ್ರದೇಶಗಳಿಗೆ 5.6 ಮಿ. ಲಸಿಕೆಗಳ ಪೂರೈಕೆ : ಕೇಂದ್ರ 

09:01 PM Jun 17, 2021 | Team Udayavani |

ನವ ದೆಹಲಿ : ಇನ್ನು ಮೂರು ದಿನಗಳೊಳಗಾಗಿ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 5.6 ಮಿಲಿಯನ್ ಲಸಿಕೆಯ ಡೋಸ್ ಗಳನ್ನು ಕೇಂದ್ರ ಸರ್ಕಾರ ನಿಡಲಿದೆ ಎಂದು ಇಂದು(ಗುರುವಾರ, ಜೂನ್ 17) ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

56,70,350 ಹೆಚ್ಚು ಲಸಿಕೆಯ ಡೋಸ್ ಗಳು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸುವುದಕ್ಕಾಗಿ ತಯಾರಿಯಾಗಿದೆ. ಇನ್ನು ಮೂರು ದಿನಗಳಲ್ಲಿ ಅವುಗಳನ್ನು ಪೂರೈಸುವ ಕಾರ್ಯ ನಡೆಯುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 10685 ಸೋಂಕಿತರು ಗುಣಮುಖ; 5983 ಕೋವಿಡ್ ಹೊಸ ಪ್ರಕರಣ ಪತ್ತೆ

ಒಟ್ಟಾರೆಯಾಗಿ ಇನ್ನೂ 2,18,28,483 ಕೋವಿಡ್ ಲಸಿಕೆ ಡೋಸ್ ಗಳು  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ. ಈವರೆಗೆ ಕೇಂದ್ರ ಸರ್ಕಾರದಿಂದ 27,28,31,900 ಲಸಿಕೆಗಳನ್ನು ಅಗತ್ಯಕ್ಕನುಗುಣವಾಗಿ ಪೂರೈಸಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ನಷ್ಟವಾದ ಲಸಿಕೆಗಳನ್ನು ಒಳಗೊಂಡು ಒಟ್ಟು ಬಳಕೆ 25,10,03,417 ಡೊಸ್ ಗಳನ್ನು ಕೇಂದ್ರದಿಂದ ರಾಜ್ಯಗಳಿಗೆ ಪೂರೈಸಲಾಗಿದೆ.  2.18 (2,18,28,483)  ಕೋಟಿಗಿಂತ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳು ಇನ್ನೂ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ ಎಂದು ತಿಳಿಸಿದೆ.

Advertisement

ಇನ್ನು, ದೇಶದಾದ್ಯಂತ ಈವರೆಗೆ ಲಸಿಕಾ ಅಭಿಯಾನದ ಅಡಿಯಲ್ಲಿ 26,55,19,251 ಲಸಿಕೆಗಳ ಡೋಸ್ ಗಳನ್ನು ನೀಡಲಾಗಿದ್ದು, ದೇಶದ ಎಲ್ಲಾ ನಾಗರಿಕರಿಗೂ ಲಸಿಕೆ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೊದಿಯವರ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವಾಲಯ ಹೇಳಿದೆ.

ಈ ವರ್ಷದ ಜನವರಿ 16 ರಂದು ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡುವುದರ ಮೂಲಕ ವಿಶ್ವದ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ಆರಂಭಿಸಿತ್ತು. ಫೇಬ್ರವರಿ 2 ರಂದು ಫ್ರಂಟ್ ಲೈನ್ ವರ್ಕರ್ಸ್ ಗೆ, ಮಾರ್ಚ್ 1 ರಂದು 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಅಭಿಯಾನದ ಅಡಿಯಲ್ಲಿ ಉಚಿತ ಲಸಿಕೆಯನ್ನು ನೀಡಲಾಗಿತ್ತು.

ಇನ್ನು, ಏಪ್ರಿಲ್ 1 ರಿಂದ  45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿತು. 18-44 ವಯಸ್ಸಿನ ಫಲಾನುಭವಿಗಳಿಗೆ ಲಸಿಕಾ ಅಭಿಯಾನದ 3 ನೇ ಹಂತವನ್ನು ಮೇ 1 ರಂದು ಪ್ರಾರಂಭಿಸಲಾಯಿತು.

ಇದನ್ನೂ ಓದಿ : ಮೈಕ್ರೊಸಾಫ್ಟ್ ಗೆ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ..!

Advertisement

Udayavani is now on Telegram. Click here to join our channel and stay updated with the latest news.

Next