Advertisement

ಏಮ್ಸ್‌: ರಾಜ್‌ಕೋಟ್‌ ಯಾ ವಡೋದರ: ಆಯ್ಕೆ ಕೇಂದ್ರದ್ದು: ಡಿಸಿಎಂ ಪಟೇಲ್‌

05:42 PM Dec 26, 2018 | udayavani editorial |

ಅಹ್ಮದಾಬಾದ್‌ : ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ (ಏಮ್ಸ್‌) ಗಾಗಿ ಗುಜರಾತ್‌ನ ರಾಜ್‌ಕೋಟ್‌ ಮತ್ತು ವಡೋದರ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವಂತೆಯೇ, ಏಮ್ಸ್‌ ಯಾರ ಪಾಲಿಗೆ ಆಗುವುದೆಂಬುದನ್ನು ಕೇಂದ್ರ ಸರಕಾರವೇ ನಿರ್ಧರಿಸಲಿದೆ ಎಂದು ಗುಜರಾತ್‌ ಸರಕಾರ ಹೇಳಿದೆ. 

Advertisement

ರಾಜ್‌ಕೋಟ್‌ ಮತ್ತು ವಡೋದರ ನಗರಗಳಲ್ಲಿನ ಸ್ಥಳಗಳನ್ನು ಗುರುತಿಸಿ, ಅರ್ಹತೆಗಳನ್ನು ಪಟ್ಟಿ ಮಾಡಿ ಈಗಾಗಲೇ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರಕಾರ ಆ ಬಗ್ಗೆ ನಿರ್ಧರಿಸಲಿದೆ ಎಂದು ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಹೇಳಿದರು. 

ರಾಜ್‌ಕೋಟ್‌ ಮತ್ತು ವಡೋದರ ನಡುವಿನ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next