Advertisement

ಝೈಕೋವ್‌ ಡಿ ಲಸಿಕೆಗೆ 265 ರೂ.ದರ; ಕೇಂದ್ರ ಸರಕಾರದಿಂದ ದರ ನಿಗದಿ

11:31 PM Nov 08, 2021 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಮಕ್ಕಳಿಗಾಗಿ ಲಸಿಕೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಝೈಡಸ್‌ ಕ್ಯಾಡಿಲಾದಿಂದ ಝೈಕೋವ್‌ ಡಿ ಲಸಿಕೆಯ 1 ಕೋಟಿ ಡೋಸ್‌ಗಳನ್ನು ಖರೀದಿಸಲಿದೆ.

Advertisement

ಪ್ರತಿ ಡೋಸ್‌ಗೆ 265 ರೂ. ಮತ್ತು ಜೆಟ್‌ ಆ್ಯಪ್ಲಿಕೇಟರ್‌ ಎಂಬ ವ್ಯವಸ್ಥೆಗೆ 93 ರೂ. ಸೇರಿಸಿ ಒಟ್ಟು 358 ರೂ. ಆಗಲಿದೆ. ಕೇಂದ್ರದ ಜತೆಗೆ ಲಸಿಕೆ ಖರೀದಿಯ ಬಗ್ಗೆ ಮಾತುಕತೆ ನಡೆಸಲಾಗಿದ್ದರೂ, ಇದುವರೆಗೆ ದರ ನಿಗದಿಯಾಗಿರಲಿಲ್ಲ. ಫಾರ್ಮಾ ಜೆಟ್‌ ಎಂಬ ಸೂಜಿ ರಹಿತ ವ್ಯವಸ್ಥೆಯ ಮೂಲಕ ಮಕ್ಕಳಿಗೆ ಮೂರು ಡೋಸ್‌ ಕೊರೊನಾ ಪ್ರತಿರೋಧಕ ಲಸಿಕೆ ನೀಡಲು ಉದ್ದೇಶಿಸ ಲಾಗಿದೆ. 12ರಿಂದ 17 ವರ್ಷ ವಯೋಮಿತಿಯವರಿಗೆ ಈ ಲಸಿಕೆ ನೀಡಲು ಉದ್ದೇಶಿಸಲಾಗಿದೆ.

ಕನಿಷ್ಠ ಕೇಸು: ದೇಶದಲ್ಲಿ ಭಾನುವಾರದಿಂದ ಸೋಮವಾರದ ಅವಧಿಯಲ್ಲಿ 11,451 ಹೊಸ ಕೇಸು ಮತ್ತು ಇದೇ ಅವಧಿಯಲ್ಲಿ 266 ಮಂದಿ ಅಸುನೀಗಿದ್ದಾರೆ. ದಿನವಹಿ ದೃಢಪಟ್ಟ ಸೋಂಕು ಪ್ರಕರಣ 262 ದಿನಗಳಲ್ಲಿಯೇ ಕನಿಷ್ಠದ್ದು. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.24 ಆಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ವಿದೇಶ ಪ್ರಯಾಣ ಶುರು: ಈ ನಡುವೆ, ವರ್ಷಗಳ ಅನಂತರ ಅಮೆರಿಕ ತನ್ನ ಗಡಿಗಳನ್ನು ತೆರೆದಿದೆ. ಹೀಗಾಗಿ, 2 ಡೋಸ್‌ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾ ನೆಗೆಟಿವ್‌ ವರದಿ ಪಡೆದುಕೊಂಡ ಭಾರತೀಯರು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ. ಜತೆಗೆ ಯು.ಕೆ., ಕೆನಡಾಕ್ಕೆ ತೆರಳಲಿರುವ ಭಾರತೀಯರಿಗೆ ಕೂಡ ಪ್ರಯಾಣಕ್ಕೆ ಅವಕಾಶ ದೊರಕಿದೆ.

ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Advertisement

ಇನ್ನೊಂದು ವರ್ಷ ಚೀನ ಬಂದ್‌?
“ಹೆಚ್ಚಾಗುತ್ತಿರುವ ಡೆಲ್ಟಾ ರೂಪಾಂತರಿ ಕೇಸುಗಳಿಂದಾಗಿ ಇನ್ನೂ ಒಂದು ವರ್ಷ ಕಾಲ ಚೀನ ಬಂದ್‌ ಆಗಲಿರುವ ಸಾಧ್ಯತೆ ಇದೆ’ ಹೀಗೆಂದು ಆಕ್ಸ್‌ಫ‌ರ್ಡ್‌ ವಿವಿಯ ಸಾಂಕ್ರಾ ಮಿಕ ರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಚೆಂಗ್‌ ಝೆಂಗ್‌ಮಿಗ್‌ ಅಭಿಪ್ರಾಯಪಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ಬೂಸ್ಟರ್‌ ಡೋಸ್‌ ಕೂಡ ಅಲ್ಲಿ ನೀಡಲು ಸಾಧ್ಯವಾಗಿಲ್ಲ. ಜತೆಗೆ ಈಗಾಗಲೇ ಲಸಿಕೆ ಪಡೆದುಕೊಂಡವರಲ್ಲಿಯೂ ಕೂಡ ಅದು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಚೀನದ ಹಲವು ಭಾಗಗಳಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗಿ ದೃಢವಾಗತೊಡಗಿದೆ. ಹೀಗಾಗಿ ಕೆಲವು ಸ್ಥಳಗಳಲ್ಲಿ ಹಠಾತ್‌ ಲಾಕ್‌ಡೌನ್‌, ಸಾಮೂಹಿಕ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next