Advertisement

ಮಹಿಳೆ ಆರೋಪ: ಹಿರಿಯ ಐಎಎಸ್ ಅಧಿಕಾರಿ ಜಿತೇಂದ್ರ ನಾರಾಯಣ್ ಅಮಾನತು

07:50 PM Oct 17, 2022 | Team Udayavani |

ನವದೆಹಲಿ: ಪೋರ್ಟ್ ಬ್ಲೇರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಹಿರಿಯ ಐಎಎಸ್ ಅಧಿಕಾರಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನಾರಾಯಣ್ ಅವರನ್ನು ಕೇಂದ್ರ ಸರಕಾರ ಸೋಮವಾರ ಅಮಾನತುಗೊಳಿಸಿದೆ.

Advertisement

ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ಪ್ರಸ್ತುತ ದೆಹಲಿ ಹಣಕಾಸು ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವ ನರೇನ್ ವಿರುದ್ಧ ತತ್ ಕ್ಷಣ ಕಠಿಣ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ ನಂತರ ಅಮಾನತು ಮಾಡಲಾಗಿದೆ.

ಇದನ್ನೂ ಓದಿ : ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ. ಚಂದ್ರಚೂಡ್ ನೇಮಕ

ದರ್ಜೆ ಮತ್ತು ಸ್ಥಾನಮಾನವನ್ನು ಲೆಕ್ಕಿಸದೆ, ವಿಶೇಷವಾಗಿ ಮಹಿಳೆಯರ ಘನತೆಗೆ ಸಂಬಂಧಿಸಿದ ಘಟನೆಗಳಿಗೆ ಅಧಿಕಾರಿಗಳ ಅಶಿಸ್ತಿನ ಕೃತ್ಯಗಳ ಬಗ್ಗೆ ಶೂನ್ಯ-ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ಸರಕಾರವು ಬದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.

ನರೇನ್ ಅವರು ದ್ವೀಪಸಮೂಹದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ 21 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ಸಚಿವಾಲಯವು ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರಿಂದ ಭಾನುವಾರ ವರದಿಯನ್ನು ಸ್ವೀಕರಿಸಿದೆ.

Advertisement

1990 ರ ಬ್ಯಾಚ್‌ನ ಐಎಎಸ್ ನರೇನ್ ಅವರ ಕಡೆಯಿಂದ ಗಂಭೀರ ದುಷ್ಕೃತ್ಯ ಮತ್ತು ಅಧಿಕೃತ ಸ್ಥಾನದ ದುರುಪಯೋಗದ ಸಾಧ್ಯತೆಯನ್ನು ವರದಿಯು ಸೂಚಿಸಿದ್ದರಿಂದ, ಕಾನೂನು ಪ್ರಕಾರ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ತಕ್ಷಣ ಕಠಿಣ ಕ್ರಮಕ್ಕೆ ಶಾ ನಿರ್ದೇಶನ ನೀಡಿದರು. ಅದರಂತೆ, ತಕ್ಷಣವೇ ಜಾರಿಗೆ ಬರುವಂತೆ ನಾರಾಯಣ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next