Advertisement

ಆರ್‌ಟಿಐ ಹುದ್ದೆ ಭರ್ತಿಗೆ ಸುಪ್ರೀಂಕೋರ್ಟ್‌ ಸೂಚನೆ

06:00 AM Jul 03, 2018 | |

ಹೊಸದಿಲ್ಲಿ: ಮಾಹಿತಿ ಹಕ್ಕು ಆಯೋಗದ ಹುದ್ದೆಗಳ ಭರ್ತಿಗೆ ವಿಳಂಬ ತೋರುತ್ತಿರುವ ಕೇಂದ್ರ ಸರಕಾರ ಹಾಗೂ 8 ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿಮಾಡಿದೆ.

Advertisement

ಕೇಂದ್ರ ಸರಕಾರ ಮಾತ್ರವಲ್ಲದೆ, ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ರಾಜ್ಯಗಳು ಆರ್‌ಟಿಐ ಆಯುಕ್ತ ಹುದ್ದೆಗಳ ನೇಮಕಾತಿ ಮಾಡುವಲ್ಲಿ ನಿರ್ಲಕ್ಷ್ಯವಹಿಸಿವೆ. ಇದ ರಿಂದ ಆರ್‌ಟಿಐನಡಿ ಕೇಳಲಾಗಿದ್ದ ಸಹಸ್ರಾರು ಮನವಿಗಳು ಬಾಕಿ ಉಳಿ ಯುತ್ತಿವೆ ಎಂದು ಆರೋಪಿಸಿ ಸಲ್ಲಿಸ ಲಾಗಿದ್ದ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಆಯಾ ರಾಜ್ಯಗಳಿಗೆ ಸೂಚಿಸಿದೆ. 

ಕೇಂದ್ರೀಯ ಮಾಹಿತಿ ಆಯೋಗದ ಮುಂದೆ 23 ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಇವೆ. ಕರ್ನಾಟಕದಲ್ಲಿ 6 ಹುದ್ದೆಗಳು ಖಾಲಿಯಿದ್ದು, 33 ದೂರು ಗಳು ಬಾಕಿ ಇವೆ. ಮಹಾರಾಷ್ಟ್ರವೊಂದ ರಲ್ಲೇ 40 ಸಾವಿರ ಅರ್ಜಿಗಳು, ಕೇರಳದಲ್ಲಿ 14 ಸಾವಿರ ಅರ್ಜಿಗಳು ಹಾಗೂ ಬಂಗಾಳದಲ್ಲಿ 10 ವರ್ಷದಿಂದಲೂ ಅರ್ಜಿಗಳು ವಿಲೇವಾರಿಗೆ ಕಾಯುತ್ತಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

10 ದಿನದಲ್ಲಿ ಅಫಿಡವಿಟ್‌ ಸಲ್ಲಿಸಿ: ದೇಶದಲ್ಲಿ ಕಾಲಮಿತಿಯೊಳಗೆ ಲೋಕ ಪಾಲರ ನೇಮಕಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರ ಸರಕಾರ ವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, 10 ದಿನಗಳ ಒಳಗೆ ಅಫಿಡವಿಟ್‌ ಸಲ್ಲಿಸುವಂತೆ ನಿರ್ದೇಶನ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next