Advertisement

ಪೊಲೀಸ್‌, ರಕ್ಷಣೆ ವಾಹನಕ್ಕೆ ಬಣ್ಣದ ದೀಪ ಬಳಕೆಗೆ ಅಸ್ತು

02:42 AM May 08, 2017 | Team Udayavani |

ಹೊಸದಿಲ್ಲಿ: ಪೊಲೀಸ್‌, ರಕ್ಷಣೆ, ಅರೆಸೇನಾಪಡೆಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಇರುವ ತುರ್ತು ವಾಹನಗಳಲ್ಲಿ ಕೆಂಪು, ನೀಲಿ ಹಾಗೂ ಬಿಳಿ ಬಣ್ಣದ ದೀಪಗಳ ಬಳಕೆಗೆ ಕೇಂದ್ರಸರಕಾರ ಅನುಮತಿ ನೀಡಿದೆ. ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ಕಳೆದ ತಿಂಗಳಷ್ಟೇ ಕೇಂದ್ರ ಸಂಪುಟವು ಎಲ್ಲ ವಾಹನಗಳಿಂದ ಕೆಂಪುದೀಪ ತೆಗೆದುಹಾಕುವ ನಿರ್ಧಾರಕ್ಕೆ ಬಂದಿತ್ತು. ಆ್ಯಂಬುಲೆನ್ಸ್‌ ಹಾಗೂ ಅಗ್ನಿಶಾಮಕ ವಾಹನಗಳಿಗೆ ಮಾತ್ರ ಇದರಿಂದ ವಿನಾಯ್ತಿ ನೀಡಲಾಗಿತ್ತು. ಇದೀಗ ಹೊಸ ಅಧಿಧಿಸೂಚನೆ ಹೊರಡಿಸಿರುವಸರಕಾರ, ತುರ್ತು ಮತ್ತು ವಿಪತ್ತು ನಿರ್ವಹಣೆಯ ಕರ್ತವ್ಯದಲ್ಲಿರುವ ವಾಹನಗಳಿಗೆ ಬಹುಬಣ್ಣಗಳ ದೀಪಗಳ ಬಳಕೆಗೆ ಅವಕಾಶವಿದೆ ಎಂದು ಹೇಳಿದೆ.

Advertisement

ಅಗ್ನಿಶಾಮಕ, ಪೊಲೀಸ್‌, ರಕ್ಷಣೆ, ಅರೆಸೇನಾಪಡೆ ಮಾತ್ರವಲ್ಲದೆ, ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಸುನಾಮಿಯಂಥ ಪ್ರಾಕೃತಿಕ ವಿಕೋಪಗಳು ಮತ್ತು ಅಣು ದುರಂತದಂಥ ಮಾನವ ನಿರ್ಮಿತ ಅವಘಡಗಳು ಸಂಭವಿಸಿದಾಗ, ಅವುಗಳನ್ನು ನಿರ್ವಹಿಸುವ ವಾಹನಗಳೂ ಬಹುಬಣ್ಣದ ದೀಪಗಳನ್ನು ಬಳಸಬಹುದು ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next