Advertisement

2018ರಿಂದ ಹಜ್‌ ಸಬ್ಸಿಡಿ ರದ್ದು?

06:00 AM Oct 08, 2017 | Team Udayavani |

ಮುಂಬೈ: ವಾರ್ಷಿಕ ಹಜ್‌ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿಗೆ ಸದ್ಯದಲ್ಲೇ ಬ್ರೇಕ್‌ ಬೀಳಲಿದೆ.

Advertisement

ಮಾಜಿ ಕಾರ್ಯದರ್ಶಿ ಅಫ‌lಲ್‌ ಅಮಾನುಲ್ಲಾ ನೇತೃತ್ವದ ಸಮಿತಿ ಇಂತಹುದೊಂದು ಶಿಫಾರಸು ಮಾಡಿದೆ. ಶನಿವಾರ ಕರಡು ಹಜ್‌ ನೀತಿ 2018 -22ರಲ್ಲಿ ಕರಡನ್ನು ಕೇಂದ್ರ ಸಚಿವ ಮುಖಾ¤ರ್‌ ಅಬ್ಟಾಸ್‌ ನಖೀÌ ಅವರಿಗೆ ಸಲ್ಲಿಸಲಾಗಿದೆ. ಹಜ್‌ ಸಬ್ಸಿಡಿ ರದ್ದು, 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ 4 ಮಂದಿಯಿರುವ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು(ಈಗಿರುವ ನಿಯಮದಂತೆ ಪುರುಷರು ಜತೆಗಿಲ್ಲದೆ ಮಹಿಳೆ ಯಾತ್ರೆ ಕೈಗೊಳ್ಳುವಂತಿಲ್ಲ) ಎಂಬಿತ್ಯಾದಿ ಶಿಫಾರಸುಗಳು ಈ ಕರಡು ಪ್ರತಿಯಲ್ಲಿವೆ.

ಮುಂದಿನ ವರ್ಷದ ಹಜ್‌ ಯಾತ್ರೆಗೆ ಈ ಹೊಸ ನೀತಿ ಅನ್ವಯವಾಗಲಿದೆ. ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದೆ. ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ರೂಪಿಸಿದ ನೀತಿಯಾಗಿದೆ ಎಂದು ಕೇಂದ್ರ ಸಚಿವ ನಖೀÌ ತಿಳಿಸಿದ್ದಾರೆ. ಕ್ರಮೇಣವಾಗಿ ಹಜ್‌ ಸಬ್ಸಿಡಿಯನ್ನು ಇಳಿಸುತ್ತಾ ಬಂದು, 2022ರೊಳಗೆ ಸಂಪೂರ್ಣವಾಗಿ ಸಬ್ಸಿಡಿ ರದ್ದು ಮಾಡುವಂತೆ 2012ರಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಸಮಿತಿ ರಚಿಸಿತ್ತು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕರಡು ನೀತಿಯಲ್ಲಿನ ಕೆಲವು ಶಿಫಾರಸುಗಳು
– ಹಜ್‌ ಸಬ್ಸಿಡಿ ಸಂಪೂರ್ಣ ರದ್ದು
– 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರು ಇರುವ ತಂಡದೊಂದಿಗೆ ಯಾತ್ರೆ ಕೈಗೊಳ್ಳಬಹುದು
– 45ಕ್ಕಿಂತ ಕಡಿಮೆ ವಯಸ್ಸಿನವರು ತಂದೆ, ಸೋದರ ಅಥವಾ ಪುತ್ರನೊಂದಿಗೆ ಯಾತ್ರೆ ಮಾಡಬೇಕು
– ವಿಮಾನ ಹತ್ತುವಂಥ ಸ್ಥಳಗಳನ್ನು ಈಗಿರುವ 21ರಿಂದ 9ಕ್ಕೆ ಇಳಿಕೆ
– ಸಬ್ಸಿಡಿ ರದ್ದಾದ ಬಳಿಕ ಉಳಿಯುವ ಹಣವನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣಕ್ಕೆ ಬಳಕೆ ಮಾಡಬೇಕು
– ವೆಚ್ಚ ತಗ್ಗಿಸುವ ಸಲುವಾಗಿ ಯಾತ್ರಿಕರನ್ನು ಹಡಗುಗಳ ಮೂಲಕ ಕಳುಹಿಸುವ ಕುರಿತು ಸೌದಿ ಸರ್ಕಾರದೊಂದಿಗೆ ಮಾತುಕತೆ
– ಮುಂದಿನ 5 ವರ್ಷಗಳ ಕಾಲ ಹಜ್‌ ಕಮಿಟಿ ಮತ್ತು ಖಾಸಗಿ ಸಂಸ್ಥೆಗಳ ಹಜ್‌ ಕೋಟಾ 70:30ರ ಅನುಪಾತದಲ್ಲಿ ಹಂಚಿಕೆ

ವಿಮಾನ ಹತ್ತುವ 9 ಸ್ಥಳಗಳು
ಬೆಂಗಳೂರು, ದೆಹಲಿ, ಲಕ್ನೋ, ಕೋಲ್ಕತಾ, ಅಹಮದಾಬಾದ್‌, ಮುಂಬೈ, ಚೆನ್ನೈ, ಹೈದರಾಬಾದ್‌, ಕೊಚ್ಚಿ.

Advertisement

ಹೇರ್‌ ಕಟ್ಟಿಂಗ್‌, ಐಬ್ರೋ ಶೇಪ್‌ಗೆ ಫ‌ತ್ವಾ!
ಮುಸ್ಲಿಂ ಮಹಿಳೆಯರು ತಮ್ಮ ಹುಬ್ಬುಗಳನ್ನು ಟ್ರಿಮ್‌ ಮಾಡುವುದು ಹಾಗೂ ಶೇಪ್‌ ಕೊಡುವುದು, ಹೇರ್‌ ಕಟ್ಟಿಂಗ್‌ ಮಾಡಿಸುವುದನ್ನು ನಿಷೇಧಿಸಿ ದಾರುಲ್‌ ಉಲೂಮ್‌ ದಿಯೋಬಾಂದ್‌ ಶನಿವಾರ ಫ‌ತ್ವಾ ಹೊರಡಿಸಿದೆ. ಈ ಎಲ್ಲ ಪ್ರಕ್ರಿಯೆಗಳು ಇಸ್ಲಾಂಗೆ ವಿರುದ್ಧವಾದದ್ದು ಎಂದು ಹೇಳಿದೆ. ಐಬ್ರೋ ಶೇಪ್‌ ಮತ್ತು ಕೂದಲು ಕತ್ತರಿಸುವುದರ ಕುರಿತು ಸಹರಾನ್ಪುರದ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ, ದಿಯೋಬಾಂದ್‌ನ ಧರ್ಮಗುರುಗಳು ಈ ಆದೇಶ ಹೊರಡಿಸಿದ್ದಾರೆ. ಹೆಣ್ಣುಮಕ್ಕಳು ಬ್ಯೂಟಿಪಾರ್ಲರ್‌ಗೆ ತೆರಳುವುದೇ ಧರ್ಮವಿರೋಧಿ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next