Advertisement
ತೀರ್ಪಿಗೆ ದಿನಗಣನೆ ಆರಂಭವಾದಾಗಿನಿಂದಲೇ ಉತ್ತರಪ್ರದೇಶ ಸಹಿತ ಕೆಲವು ರಾಜ್ಯಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವೆಂಬಂತೆ, ಗುರುವಾರ ಕೇಂದ್ರ ಸರಕಾರವೇ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಎಚ್ಚರದಿಂದಿರಿ ಎಂಬ ಸೂಚನೆಯ ಜತೆಗೆ ಭದ್ರತಾ ಸಲಹೆಗಳನ್ನು ರವಾನಿಸಿದೆ.
ತೀರ್ಪಿನ ಬಳಿಕ ದಿಲ್ಲಿಯ ಹಜ್ರತ್ ನಿಜಾ ಮುದ್ದೀನ್ ದರ್ಗಾದ 20 ಮುಸ್ಲಿಂ ಮುಖಂಡರ ನಿಯೋಗವು ದೇಶಾದ್ಯಂತ ಸಂಚರಿಸಿ ಶಾಂತಿ ಕಾಪಾಡುವಂತೆ ಸಮುದಾಯಕ್ಕೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ರೈಲ್ವೇ ಪೊಲೀಸರು ಗುರುವಾರ ತಮ್ಮ ಎಲ್ಲ ವಲಯಗಳಿಗೂ 7 ಪುಟಗಳ ನಿರ್ದೇಶನಗಳನ್ನು ಕಳುಹಿಸಿಕೊಟ್ಟಿದ್ದಾರೆ.
Related Articles
Advertisement
ಉ.ಪ್ರದೇಶದಲ್ಲಿ ಏನೇನು ಕ್ರಮ?-ಉತ್ತರಪ್ರದೇಶ ಸರಕಾರವು ಈ ತಿಂಗಳ ಅಂತ್ಯದವರೆಗೆ ಪೊಲೀಸ್ ಹಾಗೂ ಆಡಳಿತಾತ್ಮಕ ಇಲಾಖೆಯ ಎಲ್ಲ ಫೀಲ್ಡ್ ಆಫೀಸರ್‌ಗಳ ರಜೆಗಳನ್ನು
ರದ್ದು ಮಾಡಿದೆ. -ಇಲ್ಲಿನ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿನ ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ನಿರ್ಮಿಸಲಾಗಿದೆ. – ಎಲ್ಲ ರಾಜಕೀಯ ಪಕ್ಷಗಳ ಹಾಗೂ ಧರ್ಮಗಳ ಮುಖಂಡರು ಜನತೆಗೆ ಸಂಭ್ರಮಾಚರಣೆ ನಡೆಸದಂತೆ ಕರೆ ನೀಡಿವೆ – ಸಾಮಾಜಿಕ ಮಾಧ್ಯಮಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ. – ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳು ಹಾಗೂ ಗುಪ್ತಚರ ಜಾಲವನ್ನು ನಿಯೋಜನೆ ಮಾಡಲಾಗಿದೆ. – ಸಂವಿಧಾನ ಪೀಠದಲ್ಲಿರುವ ನ್ಯಾ| ಅಶೋಕ್ ಭೂಷಣ್ ಅವರ ಮನೆಯು ಉತ್ತರ ಪ್ರದೇಶದ ಅಶೋಕ್ ನಗರ ದಲ್ಲಿರುವ ಕಾರಣ ಅವರ ನಿವಾಸಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ವಿಎಚ್‌ಪಿಯಿಂದ ಕೆತ್ತನೆ ಕೆಲಸ ಸ್ಥಗಿತ
ಅಯೋಧ್ಯೆಯ ನಿರ್ಮಾಣ್ ಕಾರ್ಯಶಾಲಾದಲ್ಲಿ 1990ರಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿ ರುವ ಶಿಲೆಗಳು ಹಾಗೂ ಮಾರ್ಬಲ್‌ಗಳ ಕೆತ್ತನೆ ಕೆಲಸವನ್ನು ಈಗ ಸ್ಥಗಿತಗೊಳಿಸಲಾಗಿದೆ. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ, 3 ದಶಕಗಳಲ್ಲೇ ಮೊದಲ ಬಾರಿಗೆ ಕೆತ್ತನೆ ಕಾರ್ಯ ನಿಲ್ಲಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಅವರು ಹೇಳಿದ್ದಾರೆ. ಅನಗತ್ಯ ಹೇಳಿಕೆ ಬೇಡ: ಪ್ರಧಾನಿ ಮೋದಿ
ಅಯೋಧ್ಯೆ ವಿಚಾರದಲ್ಲಿ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಮತ್ತು ದೇಶದಲ್ಲಿ ಸಾಮರಸ್ಯ ಕಾಪಾಡಲು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಸಚಿವರ ಮಂಡಳಿ ಸಭೆಯಲ್ಲಿ ಈ ಕುರಿತು ಸಲಹೆ ನೀಡಿರುವ ಅವರು, ದೇಶದಲ್ಲಿ ಸೌಹಾರ್ದ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ. ಕರ್ನಾಟಕದಲ್ಲೂ ಕಟ್ಟೆಚ್ಚರ
ಕೇಂದ್ರ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರೂ ಭದ್ರತೆ ಬಿಗಿಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅರೆಸೇನಾ ಪಡೆಗಳು ಮತ್ತು ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ ಸಿಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗುತ್ತಿದೆ. ತುರ್ತು ಸಂದರ್ಭ ಹೊರತುಪಡಿಸಿ ಪೊಲೀಸರ ಎಲ್ಲ ರಜೆಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಸಮಾಜದ ಎಲ್ಲ ಸಮುದಾಯಗಳ ನಾಯಕರ ಜತೆಗೂ ಸಭೆ ನಡೆಸಲಾಗಿದೆ ಎಂದಿದ್ದಾರೆ. ತೀರ್ಪನ್ನು ಎರಡೂ ಕಡೆಯವರು ಒಪ್ಪಿಕೊಳ್ಳಬೇಕು. ಸಂಭ್ರಮಾಚರಣೆಯಾಗಲಿ, ಪ್ರತಿಭಟನೆಯಾಗಲಿ ನಡೆಯಬಾರದು. ತೀರ್ಪು ನೀಡುವವರೂ ಮನುಷ್ಯರೇ ಆಗಿರುತ್ತಾರೆ. ಹಾಗಾಗಿ ಸಣ್ಣಪುಟ್ಟ ಲೋಪಗಳು ಆಗಲೂಬಹುದು.
-ನ್ಯಾ| ಸಂತೋಷ್ ಹೆಗ್ಡೆ , ನಿವೃತ್ತ ಲೋಕಾಯುಕ್ತ