ಹೊಸದಿಲ್ಲಿ: ಪಾನ್ ಮಸಾಲ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಪರಿಹಾರ ಸೆಸ್‌ನ ಗರಿಷ್ಠ ದರಕ್ಕೆ ಕೇಂದ್ರ ಸರಕಾರ ಮಿತಿ ಹೇರಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಹಣಕಾಸು ಮಸೂದೆ 2023ಕ್ಕೆ ತಂದ ತಿದ್ದುಪಡಿ ಯಲ್ಲು ಇದು ಕೂಡ ಸೇರಿದೆ.
ತಿದ್ದುಪಡಿಯ ಪ್ರಕಾರ ಪಾನ್ ಮಸಾಲದ ಮೇಲೆ ಅದರ ಚಿಲ್ಲರೆ ಮಾರಾಟ ದರದ(ಪ್ರತೀ ಪ್ಯಾಕೆಟ್) ಗರಿಷ್ಠ ಶೇ.51ರಷ್ಟನ್ನು ಜಿಎಸ್‌ಟಿ ಪರಿ ಹಾರ ಸೆಸ್ ಎಂದು ವಿಧಿಸಬಹುದು.
ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ, ಪಾನ್ ಮಸಾಲದ ಅಂದಾಜು ಮೌಲ್ಯದ ಶೇ.135ರಷ್ಟನ್ನು ಸೆಸ್ ಎಂದು ವಿಧಿಸಲಾ ಗುತ್ತಿತ್ತು.
ಹೊಸ ತಿದ್ದುಪಡಿಯಿಂದಾಗಿ ಇನ್ನು ತಂಬಾಕು ಉತ್ಪನ್ನಗಳ ಮೇಲೂ ಗರಿಷ್ಠ ಸೆಸ್ ವಿಧಿಸಲಾಗುತ್ತದೆ. ಪಾನ್ ಮಸಾಲ, ಗುಟ್ಕಾ ಉದ್ಯಮದಲ್ಲಿ ತೆರಿಗೆ ತಪ್ಪಿಸುವಿಕೆ ನಿಯಂತ್ರಿಸಲು ಸಲ್ಲಿಕೆಯಾ ಗಿದ್ದ ವರದಿಯನ್ನು ಫೆಬ್ರವರಿಯಲ್ಲಿ ಜಿಎಸ್‌ಟಿ ಮಂಡಳಿ ಅನುಮೋದಿಸಿತ್ತು.