ನವದೆಹಲಿ: ಖಲಿಸ್ತಾನ್ ಭಾವನೆಗಳ ಪರ ಪ್ರಚಾರದ ವಿಡಿಯೋಗಳನ್ನು ಹಾಕಿದ ಪರಿಣಾಮ ಕನಿಷ್ಠ 6 ಯೂಟ್ಯೂಬ್ ಚಾನೆಲ್ ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಈ ಬಗ್ಗೆ ಮಾತನಾಡಿದ್ದು, 6 -8 ಯಟ್ಯೂಬ್ ಚಾನೆಲ್ ಗಳು ವಿದೇಶದಿಂದ ಕಾರ್ಯಚರಿಸುತ್ತಿದೆ. ಕಳೆದ 10 ದಿನಗಳಿಂದ ಈ ಚಾನೆಲ್ ಗಳಿಗೆ ನಿರ್ಬಂಧ ಹೇರಲಾಗಿದೆ. ಈ ಚಾನೆಲ್ ಗಳು ಪಂಜಾಬಿ ಭಾಷೆಯಲ್ಲಿ ಕಾರ್ಯಚರಿಸುತ್ತಿತ್ತು. ಗಡಿ ರಾಜ್ಯದಲ್ಲಿ ತೊಂದರೆಯನ್ನುಂಟು ಮಾಡುವ ನಿಟ್ಟಿನಲ್ಲಿ ಖಲಿಸ್ತಾನ್ ಭಾವನೆಗಳ ಪರವಾಗಿ ವಿಡಿಯೋಗಳನ್ನು ಮಾಡುತ್ತಿದ್ದವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನ
ಕಳೆದ ಕೆಲ ದಿನಗಳ ಹಿಂದೆ ಪಂಜಾಬ್ ನ ಅಜ್ನಾಲ ಪೊಲೀಸ್ ಠಾಣೆ ಎದುರು ಅಮೃತ್‌ಪಾಲ್ ನಾಯಕತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಪೊಲೀಸರು ಬಂಧಿಸಿರುವ ಅಮೃತ್‌ಪಾಲ್ ಸಹಚರ ಲವ್‌ಪ್ರೀತ್ ತೂಫಾನ್‌ನನ್ನು ಬಿಡುಗಡೆಗೊಳಿಸುವಂತೆ ಖಲಿಸ್ತಾನ್ ಪರ ಸಂಘಟನೆ ವಾರಿಸ್ ಪಂಜಾಬ್ ದೇ ಬೆಂಬಲಿಗರು ಅಮೃತ್‌ನ ನಾಯಕತ್ವದಲ್ಲಿ ಅಜ್ನಾಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಕತ್ತಿ, ಬಂದೂಕುಗಳನ್ನು ಹಿಡಿದು ಪೊಲೀಸರನ್ನು ಬೆದರಿಸಿ, ಬ್ಯಾರಿಕೇಡ್ ಕೂಡ ಮುರಿದು ಹಾಕಿದ್ದರು.
Related Articles
ಆಕ್ಷೇಪಾರ್ಹ ವಿಷಯವನ್ನು ಸ್ವಯಂ ಆಗಿ ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಯುಟ್ಯೂಬ್ ಗೆ ಸರ್ಕಾರ ಹೇಳಿದೆ.
ಭಾರತದಲ್ಲಿ ಆಕ್ಷೇಪಾರ್ಹ ವಿಷಯವನ್ನು ತಡೆಯಲು ಯಟ್ಯೂಬ್ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಪ್ರಾದೇಶಿಕ ಭಾಷೆಯಲ್ಲಿ ವಿಡಿಯೋಗಳು ಆಪ್ಲೋಡ್ ಆದರೆ ಅದನ್ನು ಅರ್ಥೈಸಿಕೊಂಡು ಅದನ್ನು ನಿರ್ಬಂಧ ಹೇರಲು ಕೆಲ ಸಮಯವೇ ಬೇಕಾಗುತ್ತದೆ.