Advertisement

ಮತ್ತೆ 16 ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

10:03 AM Apr 26, 2022 | Team Udayavani |

ಹೊಸದಿಲ್ಲಿ: ಸುಳ್ಳು ಮಾಹಿತಿ ಹಾಗೂ ಭಾರತ ವಿರೋಧಿ ಕಂಟೆಂಟ್‌ಗಳನ್ನು ಪ್ರಸಾರ ಮಾಡುವ ಯೂಟ್ಯೂಬ್‌ ಚಾನೆಲ್‌ಗ‌ಳ ವಿರುದ್ಧದ ಸಮರ ಮುಂದುವರಿದಿದೆ.

Advertisement

ಕೇಂದ್ರ ಸರಕಾರವು ಸೋಮವಾರ ಮತ್ತೆ ಪಾಕಿಸ್ಥಾನ ದಿಂದ ಕಾರ್ಯಾಚರಿಸುತ್ತಿದ್ದ 6 ಸೇರಿದಂತೆ ಒಟ್ಟು 16 ಯೂಟ್ಯೂಬ್‌ ಚಾನೆಲ್‌ಗ‌ಳನ್ನು ಬ್ಲಾಕ್‌ ಮಾಡಿದೆ.

ಭಾರತದ ರಾಷ್ಟ್ರೀಯ ಭದ್ರತೆ, ವಿದೇ ಶಾಂಗ ನೀತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

ಬ್ಲಾಕ್‌ ಆಗಿರುವ ಚಾನೆಲ್‌ಗ‌ಳು ಹಾಗೂ ಫೇಸ್‌ಬುಕ್‌ ಖಾತೆಗಳ ಸರಾಸರಿ ವೀಕ್ಷಕರ ಸಂಖ್ಯೆ ಸುಮಾರು 68 ಕೋಟಿ ಇತ್ತು ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next