Advertisement

ಅಧಿಕಾರಿಗಳು ವಿದೇಶಿ ಗಿಫ್ಟ್ ಸ್ವೀಕರಿಸಲು ಅಸ್ತು

12:14 AM Sep 22, 2021 | Team Udayavani |

ಹೊಸದಿಲ್ಲಿ: ಐಎಎಸ್‌, ಐಪಿಎಸ್‌, ಐಎಫ್ಒಎಸ್‌ ಅಧಿಕಾರಿಗಳು ಇನ್ನು ಮುಂದೆ ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ 50 ವರ್ಷಗಳಷ್ಟು ಹಳೆಯ ನಿಯಮಕ್ಕೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ.

Advertisement

ಅಖೀಲ ಭಾರತ ಸೇವೆಯ ನಿಯಮಗಳು, 1968 ಪ್ರಕಾರ, ಯಾವುದೇ ಐಪಿಎಸ್‌, ಐಎಎಸ್‌ ಮತ್ತು ಐಎಫ್ಒಎಸ್‌ ಅಧಿಕಾರಿ 5 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಉಡುಗೊರೆ ಸ್ವೀಕರಿಸುವಂತಿರಲಿಲ್ಲ.

ವಿದೇಶಿ ಗಣ್ಯರು ಅಥವಾ ಸ್ಥಳೀಯವಾಗಿ ಆಡಳಿತಾತ್ಮಕ ಸಂಬಂಧ ಹೊಂದಿದವರಿಂದಲೂ ಉಡುಗೊರೆ ಸ್ವೀಕರಿಸುವುದು ನಿಷಿದ್ಧ. ಆದರೆ ಇದೀಗ ಆ ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ವಿದೇಶಿ ಗಣ್ಯರಿಂದ ಉಡುಗೊರೆ ಸ್ವೀಕರಿಸಲು ಅನುಮತಿ ನೀಡಲಾಗಿದೆ. ಆದರೆ ಉಡುಗೊರೆಯ ಮೌಲ್ಯ 25 ಸಾವಿರ ರೂ. ಮೀರಿದ್ದರೆ ಮಾತ್ರ ಅದನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಹೊಸ ನಿಯಮ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next