Advertisement

ಸೆಂಟ್ರಲ್‌ ವಿಸ್ತಾ: ಎನ್‌ಕ್ಲೇವ್‌ ಬಿಡ್‌  ಡಿಇಸಿ ಇನ್‌ಫ್ರಾಸ್ಟ್ರಕ್ಷರ್‌ ಪಾಲು

11:56 PM Jul 16, 2022 | Team Udayavani |

ಹೊಸದಿಲ್ಲಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್‌ ವಿಸ್ತಾದ ಕಾರ್ಯನಿರ್ವಾಹಕ ಎನ್‌ಕ್ಲೇವ್‌ ನಿರ್ಮಾಣದ ಬಿಡ್‌ ಅನ್ನು ಹೈದರಾಬಾದ್‌ ಮೂಲದ ನಿರ್ಮಾಣ ಸಂಸ್ಥೆಯಾದ ಡಿಇಸಿ ಇನ್‌ಫ್ರಾಸ್ಟ್ರಕ್ಷರ್‌ ತನ್ನದಾಗಿಸಿಕೊಂಡಿದೆ.

Advertisement

ಸಮುಚ್ಚಯದಲ್ಲಿ ಪ್ರಧಾನಿ ಕಚೇರಿ, ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌, ಇಂಡಿಯಾ ಹೌಸ್‌ ಹಾಗೂ ನ್ಯಾಶನಲ್‌ ಸೆಕ್ಯುರಿಟಿ ಕೌನ್ಸಿಲ್‌(ಎನ್‌ಎಸ್‌ಸಿಎಸ್‌) ಇರಲಿದೆ. ಇವುಗಳನ್ನು 1,189 ಕೋಟಿ ರೂ. ವೆಚ್ಚದಲ್ಲಿ ಎನ್‌ಕ್ಲೇವ್‌ ನಿರ್ಮಿಸಿ ಕೊಡುವುದಾಗಿ ಡಿಇಸಿ ಕಂಪೆನಿ ಬಿಡ್‌ ಸಲ್ಲಿಸಿತ್ತು. ಎನ್‌ಕ್ಲೇವ್‌ ನಿರ್ಮಾಣಕ್ಕೆ ಕೇಂದ್ರ ಸರಕಾರವು 1,328 ಕೋಟಿ ರೂ. ನಿಗದಿ ಪಡಿಸಿತ್ತು.

ಡಿಇಸಿ ಸಂಸ್ಥೆಯು ಅದಕ್ಕಿಂತ ಶೇ.10.44 ಕಡಿಮೆ ವೆಚ್ಚದಲ್ಲಿಯೇ ಎನ್‌ಕ್ಲೇವ್‌ ನಿರ್ಮಿಸಿಕೊಡುವುದಾಗಿ ಹೇಳಿ ಬಿಡ್‌ ಪಡೆದಿದೆ. ಸಮುತ್ಛಯ ನಿರ್ಮಾಣದ ಜತೆಗೆ, ಐದು ವರ್ಷಗಳ ಕಾಲ ನಿರ್ವಹಣೆ ಮತ್ತು ಸ್ವತ್ಛತೆಯ ಕೆಲಸದ ಜವಾಬ್ದಾರಿಯೂ ಡಿಇಸಿಗೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next