Advertisement

ಅನಿಯಂತ್ರಿತ ಹೂಡಿಕೆ ಕಾಯ್ದೆಗೆ ಕೇಂದ್ರ ಚಿಂತನೆ

10:45 AM Feb 21, 2018 | Team Udayavani |

ಹೊಸದಿಲ್ಲಿ: ಚೀಟಿ ವ್ಯವಹಾರ ಸಹಿತ ಹಲವಾರು ಸಣ್ಣ ಪ್ರಮಾಣದ ಹೂಡಿಕೆಗಳಲ್ಲಿ ಹಣ ಹಾಕಿದ ಸಾರ್ವಜನಿಕರು ಮೋಸ ಹೋಗುವಂಥ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

 ಈ ಹಿನ್ನೆಲೆಯಲ್ಲಿ, ಸದ್ಯದಲ್ಲೇ 2018ರ ಅನಿಯಂತ್ರಿತ ಹೂಡಿಕೆ ಯೋಜನೆಗಳ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ, ಸದ್ಯಕ್ಕಿರುವ ಚಿಟ್‌ ಫ‌ಂಡ್‌ ಕಾಯ್ದೆಗೆ ತಿದ್ದುಪಡಿ ತಂದು ಹೂಡಿಕೆದಾರರಿಗೆ ಹೆಚ್ಚಿನ ಆರ್ಥಿಕ ಸವಲತ್ತುಗಳು ಸಿಗುವ ಅನುಕೂಲ ಮಾಡಲೂ ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next