ಕನಕಗಿರಿ: ಕೇಂದ್ರ-ರಾಜ್ಯ ಸರಕಾರದ ಯೋಜನೆಗಳು ಶೂನ್ಯವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಪ
ಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ವಿವಿಧ ಸಮಿತಿಯ ಕಾಂಗ್ರೆಸ್ ಪದಾಧಿ ಕಾರಿಗಳ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನನ್ನ ಅ ಧಿಕಾರವ ಧಿಯಲ್ಲಿ ತಹಶೀಲ್ದಾರ್ ಕಚೇರಿ, ಸಿಡಿಪಿಒ ಕಚೇರಿ, ತಾಪಂ ಕಚೇರಿ, ಕೆರೆ ತುಂಬುವ ಯೋಜನೆ, ರೈಸ್‌ಪಾರ್ಕ್ ಟೆಕ್ನಾಲಜಿ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳಿಗೆ ಸೂಕ್ತ ಕಚೇರಿ ನಿರ್ಮಿಸುವ ಕೆಲಸ ಶಾಸಕರಿಂದ ಆಗುತ್ತಿಲ್ಲ.
ಮನಮ್ಮ ಯೋಜನೆಗಳನ್ನು ಉದ್ಘಾಟಿಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದರು. ಕಳೆದ ಹಲವಾರು ಚುನಾವಣೆಗಳಲ್ಲಿ ರಾಜ್ಯ-ಕೇಂದ್ರದಲ್ಲಿ ಆಡಳಿತವಿದ್ದರೂ ಬಿಜೆಪಿ ನಶಿಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ ಜನರು ಕೈಹಿಡಿಯುತ್ತಾರೆ ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಪಂ ಸದಸ್ಯರಾದ ನೂರ್‌ಸಾಬ್ ಗಡ್ಡಿಗಾಲ್, ಸಂಗಪ್ಪ ಸಜ್ಜನ್, ಶರಣೇಗೌಡ ಪಾಟೀಲ್, ರಾಕೇಶ ಕಂಪ್ಲಿ, ಸಿದ್ದೇಶ ಕುಮಾರ, ರಾಜಸಾಬ ನಂದಾಪುರ, ಪ್ರಮುಖರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ರವಿ ಪಾಟೀಲ್, ಸಿದ್ದಪ್ಪ ನಿರಲೂಟಿ, ಬಸವಂತಗೌಡ, ಶರಣಪ್ಪ ಭತ್ತದ್ ಸೇರಿದಂತೆ ಇತರರು ಇದ್ದರು.