Advertisement

ಕೇಂದ್ರ ಕಾರಾಗೃಹ :ಎಡಿಜಿಪಿ ಮೇಘರಿಕ್‌ ಅವರಿಂದ  ಸ್ಥಳ ಪರಿಶೀಲನೆ

01:00 AM Feb 06, 2019 | Team Udayavani |

ಬಂಟ್ವಾಳ: ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎನ್‌.ಎಸ್‌. ಮೇಘರಿಕ್‌ ಅವರು ಮಂಗಳವಾರ ಮುಡಿಪು ಸಮೀಪದ ಇರಾ ಮತ್ತು ಕುರ್ನಾಡು ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗೃಹ ಮತ್ತು ಅಧಿಕಾರಿಗಳ ವಸತಿ ಸಮುಚ್ಚಯದ ಸ್ಥಳ ಹಾಗೂ ಯೋಜನೆಯ ನೀಲ ನಕಾಶೆಯ ಪರಿಶೀಲನೆ ನಡೆಸಿದರು.

Advertisement

ಅಧಿಕಾರಿಗಳ ಜತೆ ಚರ್ಚಿಸಿದ ಅವರು ಕಾಮಗಾರಿ ಶೀಘ್ರ ಆರಂಭಕ್ಕೆ ಬೇಕಾದ ವ್ಯವಸ್ಥೆಗಳ ಬಗ್ಗೆ ಸಲಹೆ ಪಡೆದರು. ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌. ಎಸ್‌ಪಿಡಿಎಂ ಲಕ್ಷ್ಮೀಪ್ರಸಾದ್‌, ಡಿಸಿಪಿ ಉಮಾ, ಎಸಿಪಿ ಶ್ರೀನಿವಾಸ ಗೌಡ, ಜಿಲ್ಲಾ ಕಾರಾಗೃಹ ಅಧೀಕ್ಷಕ ಚಂದನ್‌, ಪಿಡಬ್ಲೂéಡಿ ಕಾ.ನಿ. ಎಂಜಿನಿಯರ್‌ ಉಮೇಶ್‌ ಭಟ್‌ ಉಪಸ್ಥಿತರಿದ್ದರು.

ಮಂಗಳೂರು ಹಳೆಯ ಜೈಲಿನಲ್ಲಿ ಸ್ಥಳಾವಕಾಶ ಮತ್ತು ಭದ್ರತೆ ಕೊರತೆಯ ಕಾರಣ ಇರಾ ಮತ್ತು ಕುರ್ನಾಡು ಗ್ರಾಮದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಸುಪರ್ದಿಯಲ್ಲಿದ್ದ 64 ಎಕ್ರೆ ಪ್ರದೇಶದಲ್ಲಿ ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ, ಒಂದು ಸಾವಿರ ಕೈದಿಗಳನ್ನು ಇಡುವ ವ್ಯವಸ್ಥೆಯೊಂದಿಗೆ ಯೋಜಿತ ಮಾದರಿ ಜೈಲು ಹಾಗೂ ಅದರ ಆಸುಪಾಸಿನಲ್ಲಿ ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. ಪ್ರಥಮ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಜೈಲು ಕಟ್ಟಡ ನಿರ್ಮಾಣ ಕಾಮಗಾರಿ ನಡೆದ ಬಳಿಕ ಅಧಿಕಾರಿಗಳ ವಸತಿ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next