Advertisement

ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರ ಹೊಸ ಕ್ರಮ- ಬರಲಿದೆ ಭಾರತ್‌ ಅಕ್ಕಿ; ಕೆ.ಜಿ.ಗೆ 25 ರೂ.

12:46 AM Dec 28, 2023 | Team Udayavani |

ಹೊಸದಿಲ್ಲಿ: ಬೆಲೆಯೇರಿಕೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕೆ.ಜಿ.ಗೆ 25 ರೂ. ಬೆಲೆಯಲ್ಲಿ “ಭಾರತ್‌ ಅಕ್ಕಿ’ ಎಂಬ ಹೊಸ ಬ್ರ್ಯಾಂಡನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಈಗಾಗಲೇ ಯಶಸ್ವಿಯಾಗಿರುವ ಭಾರತ್‌ ಅಟ್ಟಾ ಹಾಗೂ ಭಾರತ್‌ ದಾಲ್‌ ಮಾದರಿಯಲ್ಲಿಯೇ ಈ ಭಾರತ್‌ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಸರಕಾರದ್ದು ಎಂದು ಮೂಲಗಳು ತಿಳಿಸಿವೆ.

Advertisement

ರಿಯಾಯಿತಿ ದರದಲ್ಲಿ ಅಕ್ಕಿಯನ್ನು ಜನರಿಗೆ ಒದಗಿಸುವ ಮೂಲಕ ಬೆಲೆ ಏರಿಕೆ ಪ್ರಹಾರದಿಂದ ಕೊಂಚ ನೆಮ್ಮದಿ ನೀಡುವುದು ಹಾಗೂ ಹಣದುಬ್ಬರವನ್ನು ತಗ್ಗಿಸುವುದು ಈ ಯೋಜನೆಯ ಮೂಲ ಉದ್ದೇಶ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್‌), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಹಾಗೂ ಕೇಂದ್ರೀಯ ಭಂಡಾರಗಳ ಮೂಲಕ ಈ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತದೆ.

ಸದ್ಯಕ್ಕೆ ಭಾರತ್‌ ಗೋಧಿಯನ್ನು ಕೆ.ಜಿ.ಗೆ 27.50 ಹಾಗೂ ಬೇಳೆಯನ್ನು ಕೆ.ಜಿ.ಗೆ 60 ರೂ.ಗಳಂತೆ ಸರಬರಾಜು ಮಾಡಲಾಗುತ್ತಿದೆ. ಇವುಗಳನ್ನು ದೇಶದ ವಿವಿಧ 2 ಸಾವಿರ ಕೇಂದ್ರ
ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದೇ ರೀತಿ ಭಾರತ್‌ ಅಕ್ಕಿಯನ್ನು ಮಾರಾಟ ಮಾಡುವ ಉದ್ದೇಶ ಇದೆ. ಆಹಾರಧಾನ್ಯಗಳ ಬೆಲೆಯನ್ನು ನಿಯಂತ್ರಣದಲ್ಲಿಡಲು ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳಲು ಭಾರತೀಯ ಆಹಾರ ನಿಗಮ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿಯನ್ನು ಬಿಡುಗಡೆ ಮಾಡುವ ಸಂಬಂಧ ಕೆಲವು ನಿಯಮಗಳನ್ನು ಸಡಿಲಗೊಳಿಸಿತ್ತು.

ಕಳೆದ ನವೆಂಬರ್‌ನಲ್ಲಿ ಧಾನ್ಯಗಳ ಬೆಲೆ ಶೇ. 10ರಷ್ಟು ಹೆಚ್ಚಿದ್ದರಿಂದ ಆಹಾರ ಹಣದುಬ್ಬರ ಶೇ. 8.70ರಷ್ಟಾಗಿತ್ತು. ಇದು ಗ್ರಾಹಕ ಉತ್ಪನ್ನಗಳ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next